ಸಾರಾಂಶ
1986ರಲ್ಲಿ ದಾಖಲಾಗಿದ್ದ 28.5 ಡಿಗ್ರಿ ಇದುವರೆಗಿನ ದಾಖಲೆ ಪತನವಾಗಿದ್ದು, ಊಟಿಯಲ್ಲಿ ಸಾರ್ವಕಾಲಿಕ ಗರಿಷ್ಠ 29 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ.
ಉದಕಮಂಡಲ: ಬಹುತೇಕ ಇಡೀ ದೇಶವನ್ನು ಆವರಿಸಿರುವ ಉಷ್ಣಹವೆ, ಇದೀಗ ಪ್ರವಾಸಿಗರ ಸ್ವರ್ಗ ಎನ್ನಿಸಿಕೊಂಡಿರುವ , ತಂಪು ಪ್ರದೇಶವಾದ ಶಿಖರಗಳ ರಾಣಿ ಎನಿಸಿರುವ ಉದಕಮಂಡಲ (ಊಟಿ)ಯನ್ನೂ ಆವರಿಸಿಕಕೊಂಡಿದೆ. ಸೋಮವಾರ ಊಟಿಯಲ್ಲಿ 29 ಡಿ.ಸೆ.ನಷ್ಟು ಉಷ್ಣಾಂಶ ದಾಖಲಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ಎನ್ನಿಸಿಕೊಂಡಿದೆ.
ಸೋಮವಾರ ದಾಖಲಾದ ಉಷ್ಣಾಂಶವು ಈ ಅವಧಿಯಲ್ಲಿ ದಾಖಲಾಗಿರುವ ಸಾಮಾನ್ಯ ಸರಾಸರಿ ತಾಪಮಾನಕ್ಕಿಂತ 5.4 ಡಿ.ಸೆ.ನಷ್ಟು ಹೆಚ್ಚಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 1986ರಲ್ಲಿ ಏ.29 ರಂದು ದಾಖಲಾಗಿದ್ದ 28.5 ಡಿಗ್ರಿ ಸೆಲ್ಸಿಯಸ್ ಇದುವರೆಗಿನ ಗರಿಷ್ಠ ತಾಪಮಾನವಾಗಿತ್ತು.ತಾಪಮಾನ ಹೆಚ್ಚಳದ ಹಿನ್ನೆಲೆ ತಮಿಳುನಾಡಿನ ಉತ್ತರ ಒಳನಾಡು ಪ್ರದೇಶಗಳಲ್ಲಿ ಹವಾಮಾನ ಇಲಾಖೆ ಉಷ್ಣ ಅಲೆಗಳ ಎಚ್ಚರಿಕೆ ನೀಡಿದ್ದು ಈ ಪ್ರದೇಶಗಳಲ್ಲಿ ಮೇ 3ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.