ಊಟಿಯಲ್ಲಿ ಮತ್ತೆ ಶೂನ್ಯ ಸಮೀಪಕ್ಕೆ ತಾಪಮಾನ

| Published : Jan 19 2024, 01:45 AM IST

ಸಾರಾಂಶ

2024ರ ವಾರ್ಷಿಕ ಶಿಕ್ಷಣ ವರದಿಯಲ್ಲಿ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ಹಲವು ಗ್ರಾಮೀಣ ಗಂಡು ಮಕ್ಕಳಿಗೆ ತಮ್ಮದೇ ಮಾತೃಭಾಷೆಯನ್ನು ಸರಾಗವಾಗಿ ಓದಲು ಬರುವುದಿಲ್ಲ ಎಂದು ತಿಳಿಸಲಾಗಿದೆ. ಹೀಗಾಗಿ 12ನೇ ತರಗತಿ ಬಳಿಕ ಓದಲು ಹುಡುಗಿಯರಿಗೇ ಹೆಚ್ಚು ಆಸಕ್ತಿ ಇರುವುದಾಗಿ ವರದಿ ತಿಳಿಸಿದೆ.

ಊಟಿ: ನೀಲಗಿರಿ ಪರ್ವತ ಶ್ರೇಣಿಯಲ್ಲಿರುವ ಪ್ರಸಿದ್ಧ ಗಿರಿಧಾಮ ತಮಿಳುನಾಡಿನ ಉದಕಮಂಡಲದಲ್ಲಿ(ಊಟಿ) ತಾಪಮಾನ ತೀವ್ರವಾಗಿ ಕುಸಿದಿದ್ದು ಗುರುವಾರ 1 ಡಿ.ಸೆ.ಕನಿಷ್ಠ ಉಷ್ಣಾಂಷ ದಾಖಲಾಗಿದೆ. ಮತ್ತೊಂದೆಡೆ ಉತ್ತರ ಭಾರತದ ಹಲವೆಡೆ ಮೈ ಕೊರೆವ ಚಳಿ ಆವರಿಸಿದೆ. ಜಮ್ಮು ಕಾಶ್ಮೀರದಲ್ಲಿ ಹಲವು ಕಡೆ ತಾಪಮಾನ ಶೂನ್ಯಕ್ಕಿಂತ ಕೆಳಮಟ್ಟಕ್ಕೆ ಕುಸಿದಿದ್ದು, ಪಹಲ್ಗಾಂನಲ್ಲಿ -5.8 ಡಿ.ಸೆ., ಶ್ರೀನಗರ, ಗುಲ್ಮಾರ್ಗ್‌, ಕುಪ್ವಾರಾ ಮುಂತಾದೆಡೆ -4.5 ಡಿಗ್ರಿ ತಾಪಮಾನ ದಾಖಲಾಗಿದೆ. ಹಿಮಾಚಲದಲ್ಲಿ 5 ಸೆಂ.ಮೀಗೂ ದಪ್ಪನಾದ ಮಂಜು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಹಾಗೆಯೇ ಹರ್ಯಾಣ, ಪಂಜಾಬ್‌, ರಾಜಸ್ಥಾನ, ದೆಹಲಿ ಮತ್ತು ಜಾರ್ಖಂಡ್‌ನ ಹಲವು ನಗರಗಳಲ್ಲೂ ದಟ್ಟ ಮಂಜು ಆವರಿಸಿದೆ.

ಈ ನಡುವೆ ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ಜೈಪುರಕ್ಕೆ ಎರಡು, ಮುಂಬೈ ಹಾಗೂ ಹೈದರಾಬಾದ್‌ಗೆ ತಲಾ 1 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲೂ ಸಹ ದಟ್ಟ ಮಂಜು ಆವರಿಸಿದ ಪರಿಣಾಮ 14 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಊಟಿಯಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ಶೂನ್ಯದತ್ತ ತಾಪಮಾನ ಇಳಿದಿದೆ. ಉತ್ತರ ಭಾರತದಲ್ಲೂ ದಟ್ಟ ಮಂಜು ಆವರಿಸಿದೆ. ಈ ನಡುವೆ ದೆಹಲಿಯಲ್ಲಿ ಹಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಜಾರ್ಖಂಡ್‌ನಲ್ಲಿ ಹಲವು ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ.