ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಇದೀಗ, ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಉಗ್ರಪೋಷಕ ಪಾಕಿಸ್ತಾನದ ನಿಜಬಣ್ಣ ಬಯಲು ಮಾಡುವ ರಾಜತಾಂತ್ರಿಕ ದಾಳಿಗೆ ಭಾರತ ಇದೀಗ ಅಧಿಕೃತ ಚಾಲನೆ ನೀಡಿದೆ.

ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಇದೀಗ, ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಉಗ್ರಪೋಷಕ ಪಾಕಿಸ್ತಾನದ ನಿಜಬಣ್ಣ ಬಯಲು ಮಾಡುವ ರಾಜತಾಂತ್ರಿಕ ದಾಳಿಗೆ ಭಾರತ ಇದೀಗ ಅಧಿಕೃತ ಚಾಲನೆ ನೀಡಿದೆ. 

ವಿಶ್ವಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಅಭಿಪ್ರಾಯ ರೂಪಿಸುವ ಪ್ರಯತ್ನದ ಭಾಗವಾಗಿ ಕೇಂದ್ರ ಸರ್ಕಾರ ರಚಿಸಿರುವ ಸರ್ವಪಕ್ಷಗಳ ಸಂಸದರ ಏಳು ನಿಯೋಗಗಳ ಪೈಕಿ 2 ತಂಡಗಳು ಪ್ರವಾಸ ಆರಂಭಿಸಿವೆ.

ಜೆಡಿಯು ಮುಖಂಡ ಸಂಜಯ್‌ ಕುಮಾರ್ ಝಾ ನೇತೃತ್ವದ ಮೊದಲ ತಂಡ ಬುಧವಾರ ಜಪಾನ್‌ಗೆ ತೆರಳಿದೆ. ಜಪಾನ್‌ ಭೇಟಿ ಬಳಿಕ ಈ ನಿಯೋಗವು ಮೇ 24ರಂದು ದಕ್ಷಿಣ ಕೊರಿಯಾ, ಮೇ 27 ಸಿಂಗಾಪುರ, ಮೇ 28 ಇಂಡೋನೇಷ್ಯಾ, ಮೇ 31ರಂದು ಮಲೇಷ್ಯಾಗೆ ತೆರಳಲಿದೆ.

ಈ ರೀತಿ 2ನೇ ತಂಡ ಶಿವಸೇನೆ ಸಂಸದ ಶ್ರೀಕಾಂತ್‌ ಶಿಂದೆ ನೇತೃತ್ವದ ಇನ್ನೊಂದು ನಿಯೋಗವು ಸಂಜೆ ವೇಳೆಗೆ ಯುಎಇಗೆ ಪ್ರಯಾಣ ಆರಂಭಿಸಲಿದೆ. ಆ ಬಳಿಕ ಲೈಬೀರಿಯಾ, ಕಾಂಗೋ ಮತ್ತು ಸಿಯಾರಾ ಲಿಯೋನ್‌ಗೂ ಈ ತಂಡ ಭೇಟಿ ನೀಡಲಿದೆ.