ಸಾರಾಂಶ
ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂದೂರ್ ಅನ್ನು ರಾಜ್ಯದ ಮದರಸಾಗಳ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಉತ್ತರಾಖಂಡ ಮದರಸಾ ಶಿಕ್ಷಣ ಮಂಡಳಿ ಘೋಷಿಸಿದೆ.
- ಉತ್ತರಾಖಂಡ ಮದರಸಾ ಶಿಕ್ಷಣ ಮಂಡಳಿ ನಿರ್ಣಯ
ಡೆಹ್ರಾಡೂನ್: ಪಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂದೂರ್ ಅನ್ನು ರಾಜ್ಯದ ಮದರಸಾಗಳ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಉತ್ತರಾಖಂಡ ಮದರಸಾ ಶಿಕ್ಷಣ ಮಂಡಳಿ ಘೋಷಿಸಿದೆ.
‘ಪಹಲ್ಗಾಂನಲ್ಲಿ ಉಗ್ರರು ಅಮಾಯಕ ನಾಗರಿಕರನ್ನು ಕೊಂದ ಬಗೆಯನ್ನು ಮಕ್ಕಳಿಗೆ ತಿಳಿಸಿಕೊಡುವುದು ಅತ್ಯಗತ್ಯ. ಮದರಸಾ ಪಠ್ಯಕ್ರಮದಲ್ಲಿ ಆಪರೇಷನ್ ಸಿಂದೂರ್‌ನ ಯಶಸ್ಸಿನ ಸಾಹಸಗಾಥೆಯನ್ನು ಸೇರಿಸಲು ನಿರ್ಧರಿಸಿದ್ದೇವೆ. ಈ ಕಾರ್ಯಾಚರಣೆ ಏಕೆ ಮತ್ತು ಹೇಗೆ ನಡೆಯಿತು ಎಂಬುದನ್ನು ಮಕ್ಕಳು ತಿಳಿಯುವುದು ಆವಶ್ಯಕ’ ಎಂದು ಮಂಡಳಿ ಅಧ್ಯಕ್ಷ ಮುಫ್ತಿ ಶಮೂನ್ ಖಾಸ್ಮಿ ತಿಳಿಸಿದ್ದಾರೆ.