ಸಾರಾಂಶ
ಆಪರೇಷನ್ ಸಿಂದೂರದ ವೇಳೆ ಚೀನಾ ನಿರ್ಮಿತ ಕಡಿಮೆ ಬೆಲೆಯ ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದುರುಳಿಸಲು 15 ಲಕ್ಷ ರು. ಮೌಲ್ಯದ ಕ್ಷಿಪಣಿಗಳನ್ನು ಏಕೆ ಬಳಸಲಾಯಿತು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಪ್ರಶ್ನಿಸಿದ್ದಾರೆ.
ನಾಗ್ಪುರ: ಆಪರೇಷನ್ ಸಿಂದೂರದ ವೇಳೆ ಚೀನಾ ನಿರ್ಮಿತ ಕಡಿಮೆ ಬೆಲೆಯ ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದುರುಳಿಸಲು 15 ಲಕ್ಷ ರು. ಮೌಲ್ಯದ ಕ್ಷಿಪಣಿಗಳನ್ನು ಏಕೆ ಬಳಸಲಾಯಿತು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನ ಹಾರಿಸಿರುವ ಚೀನಾ ನಿರ್ಮಿತ ಡ್ರೋನ್‌ಗಳ ಬೆಲೆ ತಲಾ 15,000 ರು. ಆಗಿರುವ ಸಾಧ್ಯತೆಯಿದೆ. ಇವುಗಳನ್ನು ಹೊಡೆದುರುಳಿಸಲು ಭಾರತ ತಲಾ 15 ಲಕ್ಷ ಬೆಲೆ ಬಾಳುವ ಕ್ಷಿಪಣಿಗಳ ಬಳಕೆ ಮಾಡಿದೆ. ಹಾಗಾಗಿ ನಮಗೆ ಆದ ನಷ್ಟದ ಕುರಿತು ಸರ್ಕಾರ ಮಾಹಿತಿ ನೀಡಬೇಕು’ ಎಂದು ಆಗ್ರಹಿಸಿದರು. ‘ಪಾಕಿಸ್ತಾನದ ವಿರುದ್ಧದ ಸಂಘರ್ಷದಲ್ಲಿ ನಮ್ಮ ರಫೇಲ್ ಯುದ್ಧವಿಮಾನ ನಷ್ಟವಾಗಿದೆಯೇ?’ ಎಂದೂ ಅವರು ಪ್ರಶ್ನಿಸಿದರು.