ಸಾರಾಂಶ
ಗದ್ವಾಲ್ ಜಿಲ್ಲೆಯ ಗುಟ್ಟ ಮಂಡಲ ಗೊರ್ಲಖಂಡದೊಡ್ಡಿ ಗ್ರಾಮದಲ್ಲಿ ನೂತನವಾಗಿ ಅನಾವರಣಗೊಳಿಸಲು ಮುಂದಾಗಿದ್ದ ಸಂತ ಕನಕದಾಸರ ಪುತ್ಥಳಿಯನ್ನು ಕೆಲ ಮುಸ್ಲಿಮರು ಬಲವಂತವಾಗಿ ತೆರವುಗೊಳಿಸಿದ ಘಟನೆ ನಡೆದಿದೆ.
ಗದ್ವಾಲ್: ಗದ್ವಾಲ್ ಜಿಲ್ಲೆಯ ಗುಟ್ಟ ಮಂಡಲ ಗೊರ್ಲಖಂಡದೊಡ್ಡಿ ಗ್ರಾಮದಲ್ಲಿ ನೂತನವಾಗಿ ಅನಾವರಣಗೊಳಿಸಲು ಮುಂದಾಗಿದ್ದ ಸಂತ ಕನಕದಾಸರ ಪುತ್ಥಳಿಯನ್ನು ಕೆಲ ಮುಸ್ಲಿಮರು ಬಲವಂತವಾಗಿ ತೆರವುಗೊಳಿಸಿದ ಘಟನೆ ನಡೆದಿದೆ.
ಖಾಸಗಿ ಜಾಗದಲ್ಲಿ ವಿಗ್ರಹ ನಿರ್ಮಿಸಲು ಮುಂದಾಗಿದ್ದು ಆ ಜಾಗದ ಮಾಲೀಕರು ಸಮ್ಮತಿ ಸೂಚಿಸಿದ್ದರು. ಆದರೆ ತಮ್ಮ ಮನೆಗಳಿಗೆ ಹೋಗಲು ಈ ವಿಗ್ರಹ ಅಡ್ಡಿಯಾಗಲಿದೆ ಎಂದು ಕಾರಣ ನೀಡಿ ಕೆಲ ಮುಸ್ಲಿಮರು ವಿಗ್ರಹವನ್ನು ಬಲವಂತವಾಗಿ ತೆರವುಗೊಳಿಸಿದ್ದಾರೆ.
ಈ ಘಟನೆಗೆ ಗ್ರಾಮಸ್ಥರು ಗರಂ ಆಗಿದ್ದು, ಕುರುಬ ಸಮುದಾಯ ಆರಾಧ್ಯ ದೈವರಾದ ಕನಕದಾಸರ ಪುತ್ಥಳಿಯನ್ನು ತೆರವುಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದರಲ್ಲಿ ಜಿಲ್ಲಾಡಳಿತ ಮುಸ್ಲಿಮರ ಪರ ಹೆಚ್ಚು ಒಲವು ಹೊಂದಿದ್ದಾರೆ. ಆದ್ದರಿಂದ ಇವರಿಗೆ ಇಷ್ಟ ಬಂದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.