2024ರಲ್ಲಿ 37 ಲಕ್ಷ ನಾಯಿ ಕಡಿತ, 54 ಜನ ರೇಬಿಸ್‌ಗೆ ಬಲಿ : ಕೇಂದ್ರ

| N/A | Published : Jul 23 2025, 01:46 AM IST / Updated: Jul 23 2025, 05:52 AM IST

stray dog attack

ಸಾರಾಂಶ

2024ರಲ್ಲಿ ದೇಶದಲ್ಲಿ 37 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈ ಪೈಕಿ 54 ಮಂದಿ ಶಂಕಿತ ರೇಬಿಸ್‌ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ನವದೆಹಲಿ: 2024ರಲ್ಲಿ ದೇಶದಲ್ಲಿ 37 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈ ಪೈಕಿ 54 ಮಂದಿ ಶಂಕಿತ ರೇಬಿಸ್‌ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

 ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಎಸ್‌. ಪಿ. ಸಿಂಗ್‌ ‘ 2024ರಲ್ಲಿ 37.17 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಇದರಲ್ಲಿ 54 ಮಂದಿ ಶಂಕಿತ ರೇಬಿಸ್‌ನಿಂದ ಸಾವನ್ನಪ್ಪಿದ್ದಾರೆ.  ಈ ಅಂಕಿ ಅಂಶಗಳನ್ನು ರಾಷ್ಟ್ರೀಯ ರೋಗ ನಿಯಂತ್ರಣದ ಅಂಕಿ ಅಂಶಗಳಿಂದ ಸಂಗ್ರಹಿಸಲಾಗಿದೆ’ ಎಂದಿದ್ದಾರೆ.

 

Read more Articles on