ಪಂಚಾಯತಿಗಳ ಸ್ವಂತ ಸಂಪನ್ಮೂಲ ಸಂಗ್ರಹಣೆ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ ನಾಲ್ಕನೇ ಸ್ಥಾನ

| Published : Nov 17 2024, 01:19 AM IST / Updated: Nov 17 2024, 05:12 AM IST

ಪಂಚಾಯತಿಗಳ ಸ್ವಂತ ಸಂಪನ್ಮೂಲ ಸಂಗ್ರಹಣೆ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ ನಾಲ್ಕನೇ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಾಯತಿಗಳ ಸ್ವಂತ ಸಂಪನ್ಮೂಲ ಸಂಗ್ರಹಣೆ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ.

 ನವದೆಹಲಿ : ಪಂಚಾಯತಿಗಳ ಸ್ವಂತ ಸಂಪನ್ಮೂಲ ಸಂಗ್ರಹಣೆ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದ ಪಂಚಾಯತಿಗಳು 2017-2022ರ ಐದು ವರ್ಷಗಳ ಅವಧಿಯಲ್ಲಿ 627.56 ಕೋಟಿ ರು. ಸಂಗ್ರಹಿಸಿವೆ ಕೇಂದ್ರ ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ಇದೇ ಅವಧಿಯಲ್ಲಿ 829.75 ಕೋಟಿ ರು. ಸಂಗ್ರಹಣೆಯೊಂದಿಗೆ ಗುಜರಾತ್‌ ಪ್ರಥಮ ಸ್ಥಾನ, 802.95 ಕೋಟಿ ರು. ಆದಾಯದೊಂದಿಗೆ ಕೇರಳ 2 ಹಾಗೂ 791.93 ಕೋಟಿ ರು. ಆದಾಯ ಸಂಗ್ರಹದೊಂದಿಗೆ ಆಂಧ್ರಪ್ರದೇಶ ಮೊದಲ 3 ಸ್ಥಾನದಲ್ಲಿವೆ.

ದೇಶದಲ್ಲಿ ಸಂಪನ್ಮೂಲ ಸಂಗ್ರಹ ಕಮ್ಮಿ:

ಒಟ್ಟಾರೆ ದೇಶದಲ್ಲಿ ಪಂಚಾಯತಿಗಳ ಸ್ವಂತ ಸಂಪನ್ಮೂಲ ಸಂಗ್ರಹ ಪ್ರಮಾಣ ತೀರಾ ಕಡಿಮೆ ಇದೆ. ಸ್ಥಳೀಯ ಸಂಸ್ಥೆಗಳು ಐದು ವರ್ಷಗಳ ಅವಧಿಯಲ್ಲಿ ತಲಾವಾರು 59 ರು. ಮಾತ್ರ ಸಂಗ್ರಹಿಸುವಷ್ಟೇ ಶಕ್ತವಾಗಿವೆ ಎಂದು ಪಂಚಾಯತ್‌ ರಾಜ್‌ ಸಚಿವಾಲಯ ತಿಳಿಸಿದೆ.

ತಲಾವಾರು ತೆರಿಗೆ ಸಂಗ್ರಹದಲ್ಲಿ ಗೋವಾ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, 1635 ರು. ಕಲೆ ಹಾಕಿದೆ. 757 ರು. ಸಂಗ್ರಹದೊಂದಿಗೆ ಪುದುಚೇರಿ 2ನೇ ಸ್ಥಾನದಲ್ಲಿದೆ.