ಔಷಧಿ ಕಂಪನಿ ಉದ್ಯೋಗಿಗಳಿಗೆ ಟಾಟಾ ಕಾರು ಗಿಫ್ಟ್!
KannadaprabhaNewsNetwork | Published : Nov 04 2023, 12:45 AM IST
ಔಷಧಿ ಕಂಪನಿ ಉದ್ಯೋಗಿಗಳಿಗೆ ಟಾಟಾ ಕಾರು ಗಿಫ್ಟ್!
ಸಾರಾಂಶ
ಹರ್‍ಯಾಣದ ಔಷಧ ಕಂಪನಿಯ ಮಾಲೀಕರೊಬ್ಬರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಟಾಟಾ ಕಾರು ನೀಡಿ ಭರ್ಜರಿ ದೀಪಾವಳಿ ಉಡುಗೊರೆ ನೀಡಿದ್ದಾರೆ
ಚಂಡೀಗಢ: ಹರ್‍ಯಾಣದ ಔಷಧ ಕಂಪನಿಯ ಮಾಲೀಕರೊಬ್ಬರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಟಾಟಾ ಕಾರು ನೀಡಿ ಭರ್ಜರಿ ದೀಪಾವಳಿ ಉಡುಗೊರೆ ನೀಡಿದ್ದಾರೆ. ಮಿಕ್ಸ್‌ಕಾರ್ಟ್ ಎಂಬ ಕಂಪನಿಯ ಮಾಲೀಕ ಎಂ.ಕೆ ಭಾಟಿಯಾ ಅವರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಹಾಯಕರು ಸೇರಿದಂತೆ 12 ಉದ್ಯೋಗಿಗಳಿಗೆ 12 ನೂತನ ಟಾಟಾ ಪಂಚ್ ಕಾರು ಉಡುಗೊರೆ ನೀಡಿದ್ದಾರೆ. ಭಾಟಿಯಾ ತಮ್ಮ ಉದ್ಯೋಗಿಗಳಿಗೆ ಕಾರು ಕೀ ನೀಡುತ್ತಿರುವ ದೃಶ್ಯಗಳು ಭಾರೀ ವೈರಲ್ ಆಗಿವೆ. ಈ ಬಗ್ಗೆ ಮಾತನಾಡಿರುವ ಭಾಟಿಯಾ ‘ನಮ್ಮ ಸಿಬ್ಬಂದಿಯ ಕಠಿಣ ಶ್ರಮ ಮತ್ತು ಸಮರ್ಪಣಾ ಭಾವದ ಕೆಲಸದಿಂದ ಪ್ರಭಾವಿತನಾಗಿದ್ದ ನಾನು ಅವರಿಗೆ ಈ ಬಾರಿ ವಿಶೇಷ ಉಡುಗೊರೆ ನೀಡಲು ನಿರ್ಧರಿಸಿದ್ದೆ’ ಎಂದಿದ್ದಾರೆ. ಟಾಟಾ ಪಂಚ್ ಕಾರಿನ ಬೆಲೆ ಕನಿಷ್ಠ 6 ಲಕ್ಷ ರು. ಇದೆ.