ಸಾರಾಂಶ
‘ಪಹಲ್ಗಾಂ ಉಗ್ರ ದಾಳಿ ನಡೆಸಿದ ಪಾಕಿಸ್ತಾನದ ಉಗ್ರರು, ಪ್ರವಾಸಿಗರು ಹೆಚ್ಚಿರುವ ಕಾರಣ ಪಹಲ್ಗಾಂನ ಬೈಸರಣ್‌ನನ್ನು ಆಯ್ಕೆ ಮಾಡಿಕೊಂಡಿದ್ದರು’ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.
ನವದೆಹಲಿ: ‘ಪಹಲ್ಗಾಂ ಉಗ್ರ ದಾಳಿ ನಡೆಸಿದ ಪಾಕಿಸ್ತಾನದ ಉಗ್ರರು, ಪ್ರವಾಸಿಗರು ಹೆಚ್ಚಿರುವ ಕಾರಣ ಪಹಲ್ಗಾಂನ ಬೈಸರಣ್‌ನನ್ನು ಆಯ್ಕೆ ಮಾಡಿಕೊಂಡಿದ್ದರು’ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.
ಗುರುವಾರ ಹೇಳಿಕೆ ಬಿಡುಗಡೆ ಮಾಡಿದ ಎನ್‌ಐಎ, ‘ಏ.22ರಂದು 26 ಜನರನ್ನು ಬಲಿಪಡೆದ ಉಗ್ರರು ಅಲ್ಲಿ ಹೆಚ್ಚಿನ ಪ್ರವಾಸಿಗರು ಬರುತ್ತಾರೆ, ಬೈಸರಣ್ ಪ್ರದೇಶವು ಹೊರ ವಲಯದಲ್ಲಿದ್ದ ಕಾರಣ ಭದ್ರತಾ ಪಡೆಗಳು ಪ್ರತಿಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಮೂವರು ಉಗ್ರರು ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದರು. ಅಲ್ಲಿ ಕುದುರೆ ಸವಾರಿ ಮಾಡುತ್ತಿದ್ದ, ಪಿಕ್ನಿಕ್‌ಗೆ ಬಂದಿದ್ದ ಪ್ರವಾಸಿಗರಲ್ಲಿ ಪುರುಷರನ್ನು ಹೊಡೆದುರುಳಿಸಿದರು’ ಎಂದು ಎನ್‌ಐಎ ತಿಳಿಸಿದೆ.
‘ಇದಕ್ಕೆ ಪ್ರತಿಯಾಗಿ ಉಗ್ರರಿಗೆ ಆಶ್ರಯ ನೀಡಿದ್ದ ಪರ್ವೇಜ್ ಅಹ್ಮದ್ ಜೊಥಾರ್ ಮತ್ತು ಬಶೀರ್ ಅಹ್ಮದ್ ಜೊಥಾರ್ ಎಂಬುವರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದೆ.