ಪಾಕಿಸ್ತಾನದಲ್ಲಿ ಶೇ.25ರಷ್ಟು ಹಣದುಬ್ಬರ!

| Published : Apr 14 2024, 01:53 AM IST / Updated: Apr 14 2024, 06:38 AM IST

ಸಾರಾಂಶ

ಆರ್ಥಿಕವಾಗಿ ಜರ್ಜರಿತ ಆಗಿರುವ ಕಿಸ್ತಾನ ಇದೀಗ, ಏಷ್ಯಾದಲ್ಲಿ ಅತ್ಯಧಿಕ ಹಣದುಬ್ಬರವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ.

ಇಸ್ಲಾಮಬಾದ್‌: ಆರ್ಥಿಕವಾಗಿ ಜರ್ಜರಿತ ಆಗಿರುವ ಕಿಸ್ತಾನ ಇದೀಗ, ಏಷ್ಯಾದಲ್ಲಿ ಅತ್ಯಧಿಕ ಹಣದುಬ್ಬರವನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ಏಷ್ಯನ್ ಅಭಿವೃದ್ಧಿ ಬ್ಯಾಂಕ್ ವರದಿಯ ಪ್ರಕಾರ ಪಾಕ್ ಶೇ.25 ರಷ್ಟು ಹಣದುಬ್ಬರ ಹೊಂದಿದೆ. ಇದು ಏಷ್ಯಾದಲ್ಲಿಯೇ ದುಬಾರಿ ದರವಾಗಿದೆ.

ಈ ಹಿಂದೆ ದಕ್ಷಿಣ ಏಷ್ಯಾದಲ್ಲಿಯೇ ಅತ್ಯಧಿಕ ಜೀವನ ವೆಚ್ಚ ಹೊಂದಿದ್ದ ಪಾಕಿಸ್ತಾನ ಇದೀಗ ಏಷ್ಯಾದಲ್ಲೇ ಮೊದಲ ಸ್ಥಾನಕ್ಕೇರಿದೆ. ಈ ದೇಶದಲ್ಲಿ ಆರ್ಥಿಕತೆಯು ಮುಂದಿನ ವರ್ಷಗಳಲ್ಲಿ ಶೇ 1.9 ರಷ್ಟು ಬೆಳೆಯಬಹುದು ಎಂದು ವರದಿ ಹೇಳಿದೆ.

ಪಾಕಿಸ್ತಾನದ ನಂತರದ ಸ್ಥಾನದಲ್ಲಿ ಮಯನ್ಮಾರ್, ಅಜೆಬೈರ್ಜಾನ್, ನೌರು ಇವೆ. ಭಾರತದಲ್ಲಿ ಹಣದುಬ್ಬರ ಶೇ.4ರಿಂದ 5ರ ಆಸುಪಾಸಿನಲ್ಲಿದೆ.

46 ದೇಶದಲ್ಲಿ ಅಧಿಕ:

ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮುಂದಿನ ವರ್ಷಗಳ ಆರ್ಥಿಕ ಸ್ಥಿತಿಯ ಬಗ್ಗೆಯೂ ಕೆಲವು ಮಾಹಿತಿಗಳನ್ನು ನೀಡಿದ್ದು, 2024- 25ರ ಆರ್ಥಿಕ ವರ್ಷದಲ್ಲಿ ಶೇ.15 ಕ್ಕೆ ಹಣದುಬ್ಬರವನ್ನುನಿಗದಿ ಪಡಿಸಿದೆ. 46 ದೇಶಗಳಲ್ಲಿ ಹಣದುಬ್ಬರ ಅಧಿಕವಾಗಿರಲಿದೆ ಎಂದಿದೆ. ಕೆಲ ದಿನಗಳ ಹಿಂದಷ್ಟೇ ವಿಶ್ವ ಬ್ಯಾಂಕ್ ಕೂಡ ಪಾಕಿಸ್ತಾನದ ಆರ್ಥಿಕ ಸ್ಥಿತಿಗತಿ ಬಗ್ಗೆ ಕಳವಳ ವ್ಯಕ್ತ ಪಡಿಸಿತ್ತು, 1 ಕೋಟಿಗೂ ಅಧಿಕ ಜನರು ಬಡತನಕ್ಕೆ ತುತ್ತಾಗಬಹುದು ಎಂದು ವರದಿ ನೀಡಿತ್ತು.