ಸಾರಾಂಶ
ಆಪರೇಷನ್ ಸಿಂದೂರ ಸಮಯದಲ್ಲಿ ಭಾರತೀಯ ವಾಯುಪಡೆಯ (ಐಎಎಫ್) 3 ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆ ಸುಳ್ಳು ಎಂದು ರಫೇಲ್ ತಯಾರಕ ಡಸಾಲ್ಟ್ ಏವಿಯೇಷನ್ ಅಧ್ಯಕ್ಷ ಮತ್ತು ಸಿಇಒ ಎರಿಕ್ ಟ್ರ್ಯಾಪಿಯರ್ ಸ್ಪಷ್ಟಪಡಿಸಿದ್ದಾರೆ.
ನವದೆಹಲಿ: ಆಪರೇಷನ್ ಸಿಂದೂರ ಸಮಯದಲ್ಲಿ ಭಾರತೀಯ ವಾಯುಪಡೆಯ (ಐಎಎಫ್) 3 ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆ ಸುಳ್ಳು ಎಂದು ರಫೇಲ್ ತಯಾರಕ ಡಸಾಲ್ಟ್ ಏವಿಯೇಷನ್ ಅಧ್ಯಕ್ಷ ಮತ್ತು ಸಿಇಒ ಎರಿಕ್ ಟ್ರ್ಯಾಪಿಯರ್ ಸ್ಪಷ್ಟಪಡಿಸಿದ್ದಾರೆ.
ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಅವರು, ‘3 ರಫೇಲ್ ವಿಮಾನಗಳನ್ನು ಹೊಡೆದುರುಳಿಸಿದ ಬಗ್ಗೆ ಪಾಕಿಸ್ತಾನ ಹೇಳಿಕೊಳ್ಳುತ್ತಿರುವುದು ನಿಜವಲ್ಲ. ಅವರ ಹೇಳಿಕೆ ತಪ್ಪೆಂದು ಈಗಾಗಲೇ ತಿಳಿದಿದೆ. ರಫೇಲ್ ತಯಾರಿಸುವ ಫ್ರೆಂಚ್ ಕಂಪನಿ ಡಸಾಲ್ಟ್, ಅಂತಹ ಯಾವುದೇ ನಷ್ಟದ ಬಗ್ಗೆ ಐಎಎಫ್‌ನಿಂದ ಮಾಹಿತಿ ಸ್ವೀಕರಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ರಫೇಲ್‌ಗೆ ಯಾವುದೇ ಯುದ್ಧವಿಮಾನ ಸಾಟಿಯಿಲ್ಲ. ಸಂಪೂರ್ಣ ವಿವರಗಳು ತಿಳಿದಾಗ, ವಾಸ್ತವವು ಅನೇಕರನ್ನು ಅಚ್ಚರಿಗೊಳಿಸಬಹುದು’ ಎಂದರು.