ಸಾರಾಂಶ
ಇಸ್ಲಾಮಾಬಾದ್: ಇದೇ ತಿಂಗಳ 14ರಂದು ಅಮೆರಿಕದಲ್ಲಿ ನಡೆಯಲಿರುವ ಸೇನಾ ದಿನಾಚರಣೆಗೆ ಅಮೆರಿಕ ಸರ್ಕಾರ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ. ಆಸೀಮ್ ಮುನೀರ್‌ಗೆ ಆಹ್ವಾನ ನೀಡಿದೆ. ಭಾರತ- ಪಾಕ್ ನಡುವಿನ ಕದನ ವಿರಾಮಕ್ಕೆ ಟ್ರಂಪ್ ಮಧ್ಯಸ್ಥಿಕೆ ಬಳಿಕದ ಈ ಭೇಟಿ ಕುತೂಹಲ ಮೂಡಿಸಿದೆ.
ಮುನೀರ್ ಜೂ.14ರಂದು ಅಮೆರಿಕದಲ್ಲಿ ನಡೆಯಲಿರುವ 250 ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 12 ರಂದೇ ಅಮೆರಿಕಗೆ ತೆರಳಲಿದ್ದಾರೆ. ಈ ಭೇಟಿಯ ಸಮಯದಲ್ಲಿ ಭಾರತ ಮತ್ತು ಅಫ್ಘಾನಿಸ್ಥಾನವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮೆರಿಕ ಒತ್ತಡ ಹೇರುವ ಸಾಧ್ಯತೆಯಿದೆ.
ಭಾರತದ ಭಾರೀ ದಾಳಿ ಬೆನ್ನಲ್ಲೇ ಪಾಕ್ ರಕ್ಷಣಾ ವೆಚ್ಚ ಶೇ.20ರಷ್ಟು ಹೆಚ್ಚಳ
ಇಸ್ಲಾಮಾಬಾದ್: ಭಾರತದ ಜತೆಗಿನ ಸಂಘರ್ಷ, ಆರ್ಥಿಕ ಸಂಕಷ್ಟದ ನಡುವೆಯೇ ಸಂಸದರ ಸಂಬಳವನ್ನು ಭಾರೀ ಪ್ರಮಾಣದಲ್ಲಿ ಏರಿಸಿ ಸುದ್ದಿಯಾಗಿದ್ದ ಪಾಕಿಸ್ತಾನ ಇದೀಗ ತನ್ನ ದೇಶದ ಬಜೆಟ್‌ನಲ್ಲಿ ರಕ್ಷಣಾ ವಲಯ ವೆಚ್ಚವನ್ನು ಶೇ.20ರಷ್ಟು ಹೆಚ್ಚಿಸಿದೆ. ಪಾಕಿಸ್ತಾನದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಸಂಸತ್‌ನಲ್ಲಿ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದು, 5331.6 ಶತಕೋಟಿ ಮೌಲ್ಯದ ಬಜೆಟ್ ಮಂಡಿಸಿದೆ. ಅದರಲ್ಲಿ 773.6 ಶತಕೋಟಿ ಹಣವನ್ನು ರಕ್ಷಣಾ ವೆಚ್ಚಕ್ಕೆ ಮೀಸಲಿರಿಸಿದೆ. ಕಳೆದ ವರ್ಷ ಪಾಕಿಸ್ತಾನ ಸರ್ಕಾರ 643.8 ಶತಕೋಟಿಯನ್ನು ರಕ್ಷಣಾ ಇಲಾಖೆಗೆ ಮೀಸಲಿರಿಸಿತ್ತು.
ಪ್ರೇಯಸಿ ಕೊಂದವನಿಗೆ ನೈಟ್ರೋಜನ್ ಗ್ಯಾಸ್ ನೀಡಿ ಮರಣದಂಡನೆ
ಅಟ್ಮೋರ್(ಅಲ್ಬಾಮಾ):1988ರಲ್ಲಿ ತನ್ನ ಪ್ರೇಯಸಿಯನ್ನು 60 ಬಾರಿ ಇರಿದು ಬರ್ಬರವಾಗಿ ಕೊಂದ ಪ್ರಕರಣದ ದೋಷಿ ಗ್ರೆಗೋರಿ ಹಂಟ್‌ಗೆ ಅಮೆರಿಕದ ಅಲ್ಬಾಮಾ ರಾಜ್ಯದ ಜೈಲೊಂದರಲ್ಲಿ ನೈಟ್ರೋಜನ್ ಗ್ಯಾಸ್ ನೀಡುವ ಮೂಲಕ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಹಂಟ್, ಕರೆನ್ ಲೇನ್ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆದರೆ ಕ್ರಮೇಣ ಇಬ್ಬರಲ್ಲೂ ವಿರಸ ಮೂಡಿತ್ತು. ಈ ನಡುವೆ ಒಂದು ದಿನ ಆಕೆಯ ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದ ಹಂಟ್ ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಹತ್ಯೆ ಮಾಡಿದ್ದ. ಪ್ರಕರಣದಲ್ಲಿ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಹೀಗಾಗಿ ಆತ ಬಯಸಿದರೆ ಬೇರೆ ಮಾರ್ಗಗಳ ಬದಲಾಗಿ ನೈಟ್ರೋಜನ್ ಗ್ಯಾಸ್ ನೀಡಿ ಶಿಕ್ಷೆ ಜಾರಿ ಮಾಡಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))