ಸಾರಾಂಶ
ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಮತ್ತೆ ನೆರೆಯ ರಾಷ್ಟ್ರದ ವಿರುದ್ಧ ಕಿಡಿ
ನವದೆಹಲಿ: ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಮತ್ತೆ ನೆರೆಯ ರಾಷ್ಟ್ರದ ವಿರುದ್ಧ ಕಿಡಿ ಕಾರಿದ್ದು, ಪಾಕಿಸ್ತಾನದಲ್ಲಿ ಅಸಂಬದ್ಧವಾಗಿ ಮಾತನಾಡುವವರಿಗೆ ಇಸ್ಲಾಂ ಗೊತ್ತಿಲ್ಲ. ಪಾಕ್ ಒಂದು ವಿಫಲ ದೇಶ ಎಂದಿದ್ದಾರೆ.
ಇತ್ತೀಚೆಗೆ ‘ಕಾಶ್ಮೀರವು ನಮ್ಮ ಕಂಠನಾಳ. ಅದನ್ನು ಪಡೆದೇ ತೀರುತ್ತೇವೆ’ ಎಂಬ ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸೀಮ್ ಮುನೀರ್ ಅವರ ಹೇಳಿಕೆಗೆ ಹಾರಿಹಾಯ್ದ ಒವೈಸಿ, ‘ಪಾಕಿಸ್ತಾನದಲ್ಲಿ ಅಸಂಬದ್ಧವಾಗಿ ಮಾತನಾಡುವವರಿಗೆ ಇಸ್ಲಾಂ ಗೊತ್ತಿಲ್ಲ.
ನೀವು (ಮುನೀರ್) ಜನರನ್ನು ಮಹಾಜಿರ್, ಪಠಾಣ್‌ಗಳು ಎಂದು ಕರೆಯುವ ದೇಶದಲ್ಲಿದ್ದೀರಿ, ನಿಮ್ಮ ದೇಶವು ತುಂಬಾ ಬಡವಾಗಿದೆ. ಜನರು ಚಿಂತಿತರಾಗಿದ್ದಾರೆ. ನಿಮಗೆ ಅಪ್ಘಾನಿಸ್ತಾನದೊಂದಿಗೆ ಭಿನ್ನಾಭಿಪ್ರಾಯಗಳಿವೆ. ಇರಾನ್‌ನೊಂದಿಗೆ ಗಡಿ ವಿವಾದವಿದೆ. ಹೀಗಾಗಿ ಪಾಕಿಸ್ತಾನ ವಿಫಲ ರಾಷ್ಟ್ರವಾಗಿದೆ’ ಎಂದು ತಿರುಗೇಟು ನೀಡಿದರು.