ವಿದೇಶಿ ಸಾಲದ ನೆರವಿನಿಂದಲೇ ಸರ್ಕಾರ ನಡೆಸುತ್ತಿರುವ ಪಾಕಿಸ್ತಾನ ಇದೀಗ ಕಾಂಡೋಮ್‌ ಸೇರಿದಂತೆ ಗರ್ಭನಿರೋಧಕಗಳ ಮೇಲಿನ ತೆರಿಗೆ ಕಡಿತ ಮಾಡಲಾಗದ ಪರಿಸ್ಥಿತಿ ತಲುಪಿದೆ. ನಿಜ. ಐಎಂಎಫ್‌ನಿಂದ ಸಾಲ ಪಡೆದಿರುವ ಪಾಕಿಸ್ತಾನ, ಇದೀಗ ಆ ಹಣಕಾಸು ಸಂಸ್ಥೆಯ ಸೂಚನೆ ಅನ್ವಯವೇ ನಡೆದುಕೊಳ್ಳಬೇಕಾಗಿ ಬಂದಿದೆ.

ಸಾಲ ನೀಡಿರುವ ಐಎಂಎಫ್‌ನಿಂದ ಬ್ರೇಕ್‌

ಕರಾಚಿ: ವಿದೇಶಿ ಸಾಲದ ನೆರವಿನಿಂದಲೇ ಸರ್ಕಾರ ನಡೆಸುತ್ತಿರುವ ಪಾಕಿಸ್ತಾನ ಇದೀಗ ಕಾಂಡೋಮ್‌ ಸೇರಿದಂತೆ ಗರ್ಭನಿರೋಧಕಗಳ ಮೇಲಿನ ತೆರಿಗೆ ಕಡಿತ ಮಾಡಲಾಗದ ಪರಿಸ್ಥಿತಿ ತಲುಪಿದೆ. ನಿಜ. ಐಎಂಎಫ್‌ನಿಂದ ಸಾಲ ಪಡೆದಿರುವ ಪಾಕಿಸ್ತಾನ, ಇದೀಗ ಆ ಹಣಕಾಸು ಸಂಸ್ಥೆಯ ಸೂಚನೆ ಅನ್ವಯವೇ ನಡೆದುಕೊಳ್ಳಬೇಕಾಗಿ ಬಂದಿದೆ.ಕಾಂಡೋಮ್‌ ಸೇರಿ ಇತರೆ ಗರ್ಭನಿರೋಧಕ ಮೇಲಿನ ಶೇ.18ರಷ್ಟು ಜಿಎಸ್‌ಟಿ ರದ್ದು ಮಾಡುವ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಚಿಂತನೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಕಲ್ಲುಹಾಕಿದೆ. ಈ ಹಣಕಾಸು ವರ್ಷದಲ್ಲಿ ಗರ್ಭನಿರೋಧಕಗಳ ಮೇಲಿನ ಜಿಎಸ್ಟಿ ರದ್ದತಿ ಬೇಡ. ಮುಂದಿನ ವರ್ಷದ ಬಜೆಟ್‌ನಲ್ಲಿ ಪರಿಶೀಲಿಸಿ ಎಂದು ಎಂದು ಅದು ಸೂಚಿಸಿದೆ ಎನ್ನಲಾಗಿದೆ. ಇದರಿಂದ ಪಾಕ್‌ ಸರ್ಕಾರಕ್ಕೆ 3600ರಿಂದ 5400 ಕೋಟಿ ರು. ಆದಾಯ ಕಡಿತಗೊಳ್ಳುವ ನಿರೀಕ್ಷೆ ಇತ್ತು. ಐಎಂಎಫ್‌ ಈಗಾಗಲೇ ಪಾಕ್ಸ್ತಾನಕ್ಕೆ 29,700 ಕೋಟಿ ರು. ಅನ್ನು ಸಾಲವಾಗಿ ನೀಡಿದೆ. ಇನ್ನೂ 11,700 ಕೋಟಿ ರು. ಸಾಲಕ್ಕೆ ಅನುಮೋದನೆ ನೀಡಿದೆ. ಸಾಲ ಮರುಪಾವತಿ ಸಂಬಂಧ ಪಾಕಿಸ್ತಾನ ಸರ್ಕಾರ ಕಟ್ಟುನಿಟ್ಟಿನ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು, ಆದಾಯ ಹೆಚ್ಚಿಸಬೇಕು, ಭ್ರಷ್ಚಾಚಾರಕ್ಕೆ ಕಡಿವಾಣ ಹಾಕಬೇಕು ಎಂಬುದೂ ಸೇರಿ ಹಲವು ಕಠಿಣ ಷರತ್ತುಗಳನ್ನು ಐಎಂಎಫ್‌ ವಿಧಿಸಿದೆ.