ಪಾಕ್‌ನಲ್ಲಿ ಮಸೂದ್ ಅಜರ್ ಸಂಬಂಧಿ ಭಾರತಕ್ಕೆ ಬೇಕಾದ ಮತ್ತೊಬ್ಬ ಉಗ್ರ ಖಾರಿ ಎಜಾಜ್ ಅಬಿದ್‌ ಹತ್ಯೆ

| N/A | Published : Apr 09 2025, 12:31 AM IST / Updated: Apr 09 2025, 04:51 AM IST

ಪಾಕ್‌ನಲ್ಲಿ ಮಸೂದ್ ಅಜರ್ ಸಂಬಂಧಿ ಭಾರತಕ್ಕೆ ಬೇಕಾದ ಮತ್ತೊಬ್ಬ ಉಗ್ರ ಖಾರಿ ಎಜಾಜ್ ಅಬಿದ್‌ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

 ಪಾಕಿಸ್ತಾನದಲ್ಲಿ ಅಪರಿಚಿತ ದಾಳಿಕೋರರು ಭಯೋತ್ಪಾದಕ ಸಂಘಟನೆ ಜೈಷ್‌-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್  ಸಂಬಂಧಿ ಖಾರಿ ಎಜಾಜ್ ಅಬಿದ್‌ನನ್ನು ಹತ್ಯೆ ಮಾಡಿದ್ದಾರೆ.

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಅಪರಿಚಿತ ದಾಳಿಕೋರರು ಭಯೋತ್ಪಾದಕ ಸಂಘಟನೆ ಜೈಷ್‌-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್   ಸಂಬಂಧಿ ಖಾರಿ ಎಜಾಜ್ ಅಬಿದ್‌ನನ್ನು ಹತ್ಯೆ ಮಾಡಿದ್ದಾರೆ. ಇದರೊಂದಿಗೆ, ಪಾಕ್‌ನಲ್ಲಿ ಅನಾಮಿಕರ ಗುಂಡಿಗೆ ಬಲಿಯಾದ ಭಾರತಕ್ಕೆ ಬೇಕಾದ ಉಗ್ರರ ಸಂಖ್ಯೆ 30ರ ಸನಿಹಕ್ಕೆ ತಲುಪಿದೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪೇಶಾವರದ ಪಿಸ್ಖಾರಾ ಪ್ರದೇಶದ ಮಸೀದಿಯಿಂದ ಹೊರಬರುತ್ತಿದ್ದಾಗ ದಾಳಿಕೋರರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಖಾರಿ ಎಜಾಜ್ ಅವರ ಆಪ್ತ ಖಾರಿ ಶಾಹಿದ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.

ಖಾರಿ ಎಜಾಜ್‌, ‘ಎಜಾಜ್ ಅಹ್ಲೆ ಸುನ್ನತ್ ವಾಲ್ ಜಮಾತ್’ ಎಂಬ ಸಂಘಟನೆಯ ಸದಸ್ಯನಾಗಿದ್ದ. ಆತ ಖತ್ಮ್-ಎ-ನಬುವತ್ ಎಂಬ ಅಂತರರಾಷ್ಟ್ರೀಯ ಸಂಘಟನೆಯ ಪ್ರಾಂತೀಯ ನಾಯಕನೂ ಆಗಿದ್ದ. ಆತ ತನ್ನ ಸಂಘಟನೆಯ ಮೂಲಕ ಜೈಷ್‌-ಎ-ಮೊಹಮ್ಮದ್‌ಗೆ ಉಗ್ರರ ನೇಮಿಸಿಕೊಳ್ಳುತ್ತಿದ್ದ. ಖಾರಿ ಎಜಾಜ್ ಭಾರತದ ಶತ್ರು ಮೌಲಾನಾ ಮಸೂದ್ ಅಜರ್   ಸಂಬಂಧಿಯಾಗಿದ್ದು ಮತ್ತು ದೇವಬಂದ್‌ ಸಿದ್ಧಾಂತದೊಂದಿಗೆ ಸಂಬಂಧ ಹೊಂದಿದ್ದ. ಆತ ಮಸೂದ್ ಅಜರ್ ಜೊತೆ ಹಲವಾರು ಬಾರಿ ವೇದಿಕೆ ಹಂಚಿಕೊಂಡಿದ್ದ.

ಭಯೋತ್ಪಾದಕ ಮಸೂದ್ ಅಜರ್‌ನ ಯೋಜನೆಯಂತೆ, ಖಾರಿ ಎಜಾಜ್  ಯುವಕರನ್ನು ಬ್ರೈನ್‌ವಾಶ್ ಮಾಡಿ ಭಯೋತ್ಪಾದಕರನ್ನಾಗಿ ಮಾಡುತ್ತಿದ್ದ. ಜೈಷ್‌ ಶಿಬಿರಗಳಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ತರಬೇತಿ ನೀಡುತ್ತಿದ್ದ.