ಪಾಕ್‌ನ ಪವಿತ್ರ ಸಿಖ್‌ ಧರ್ಮಕ್ಷೇತ್ರ ಕರ್ತಾರ್‌ಪುರ ಕಾರಿಡಾರ್ ಬಂದ್

| N/A | Published : May 08 2025, 12:30 AM IST / Updated: May 08 2025, 04:57 AM IST

ಪಾಕ್‌ನ ಪವಿತ್ರ ಸಿಖ್‌ ಧರ್ಮಕ್ಷೇತ್ರ ಕರ್ತಾರ್‌ಪುರ ಕಾರಿಡಾರ್ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ಪಂಜಾಬ್‌ನ ಗುರುದಾಸಪುರ ಜಿಲ್ಲೆಯ ಡೇರಾ ಬಾಬಾ ನಾನಕ್‌ನಲ್ಲಿರುವ ಕರ್ತಾರ್‌ಪುರ ಕಾರಿಡಾರ್ ಅನ್ನು 1 ದಿನದ ಮಟ್ಟಿಗೆ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡೀಗಢ: ಪಂಜಾಬ್‌ನ ಗುರುದಾಸಪುರ ಜಿಲ್ಲೆಯ ಡೇರಾ ಬಾಬಾ ನಾನಕ್‌ನಲ್ಲಿರುವ ಕರ್ತಾರ್‌ಪುರ ಕಾರಿಡಾರ್ ಅನ್ನು 1 ದಿನದ ಮಟ್ಟಿಗೆ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆಪರೇಷನ್ ಸಿಂಧೂರ್ ಬಳಿಕ ಗಡಿರಾಜ್ಯ ಪಂಜಾಬ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. 

ಕರ್ತಾರ್‌ಪುರ ಕಾರಿಡಾರ್, ಸಿಖ್ ಧರ್ಮಗುರು ಗುರುನಾನಕರ ಸಮಾಧಿ ಸ್ಥಳವಾದ ಪಾಕಿಸ್ತಾನದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರ ಮತ್ತು ಗುರುದಾಸಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲವನ್ನು ಸಂಪರ್ಕಿಸುತ್ತದೆ. ದಿನಕ್ಕೆ 5,000 ಭಾರತೀಯ ಯಾತ್ರಿಕರು ವೀಸಾರಹಿತವಾಗಿ ಪಾಕಿಸ್ತಾನವನ್ನು ಪ್ರವೇಶಿಸಿ ಈ ಗುರುದ್ವಾರಕ್ಕೆ ಭೇಟಿ ನೀಡಬಹುದು ಎಂದು ಭಾರತ-ಪಾಕಿಸ್ತಾನದ ನಡುವೆ ಒಪ್ಪಂದವಿದೆ.

ಬಾಲಾಕೋಟ್‌ ವಾಯುದಾಳಿ ಪಿಒಕೆನಲ್ಲಿ, ಈಗ ದಾಳಿ ಪಾಕ್‌ನಲ್ಲಿಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ನಡೆದ ‘ಆಪರೇಷನ್‌ ಸಿಂಧೂರ್‌’, 2019ರಲ್ಲಿ ತನ್ನ 40 ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಬಾಲಾಕೋಟ್‌ ವಾಯುದಾಳಿಯನ್ನು ನೆನಪಿಸುವಂತಿದೆ ಹಾಗೂ ಅದಕ್ಕಿಂತಲೂ ತೀವ್ರವಾಗಿದೆ.

 2019ರಲ್ಲಿ ಜೈಷ್‌-ಎ-ಮೊಹಮ್ಮದ್‌ ಉಗ್ರಸಂಘಟನೆಯ ತರಬೇತಿ ಕೇಂದ್ರವಿದ್ದ ಪಿಒಕೆಯ ಬಾಲಾಕೋಟ್‌ನ ಮೇಲೆ ದಾಳಿ ನಡೆಸಲಾಗಿತ್ತು. ಆದರೀಗ ಪಿಒಕೆ ಅಷ್ಟೇ ಅಲ್ಲದೆ, ಪಾಕಿಸ್ತಾನದ ಒಳಗೇ ಪ್ರವೇಶಿಸಿ ಪಂಜಾಬ್‌ ಪ್ರಾಂತ್ಯದಲ್ಲಿದ್ದ ಹಲವು ಉಗ್ರಸಂಘಟನೆಗಳ ತರಬೇತಿ ಕೇಂದ್ರಗಳ ಮೇಲೆಯೂ ನಿಖರ ದಾಳಿ ನಡಸಲಾಗಿದೆ.