ಸಾರಾಂಶ
ಪಟನಾ: ಬಿಹಾರ ಮತದಾರ ಪಟ್ಟಿಯಲ್ಲಿ ನುಸುಳುಕೋರರಿದ್ದಾರೆ ಎಂಬ ಗುಮಾನಿ ನಡುವೆಯೇ ಭಾಗಲ್ಪುರ ಜಿಲ್ಲೆಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಇಬ್ಬರು ಪಾಕಿಸ್ತಾನಿ ಮಹಿಳೆಯರು ಇದ್ದರು ಎಂದು ಬೆಳಕಿಗೆ ಬಂದಿದೆ. ಕೂಡಲೇ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಆಡಳಿತ ನಿರ್ಧರಿಸಿದೆ.
ಪಾಕಿಸ್ತಾನದ ಇಮ್ರಾನಾ ಖಾನಂ ಅಲಿಯಾಸ್ ಇಮ್ರಾನಾ ಖಾತೂನ್ ಹಾಗೂ ಫಿರ್ದೌಸಿಯಾ ಖಾನಂ ಅಲಿಯಾಸ್ ಫಿರ್ದೌಸಿಯಾ ಖಾತೂನ್ ಎಂಬ ಇಬ್ಬರು ಮಹಿಳೆಯರು 1950ರ ದಶಕದಲ್ಲಿ ಭಾರತಕ್ಕೆ ಬಂದಿದ್ದರು. ಪಾಕಿಸ್ತಾನದ ಖುಶಬ್ ಜಿಲ್ಲೆಯ ರಂಗಪುರ ಹಳ್ಳಿಯವರಾಗಿದ್ದು, ವೀಸಾ ಅವಧಿ ಮುಗಿದ ವರ್ಷಗಳ ಬಳಿಕವೂ ಭಾಗಲ್ಪುರ ಜಿಲ್ಲೆಯಲ್ಲಿ ವಾಸವಿದ್ದರು.
‘ಇಮ್ರಾನಾ ಖಾನಂ 1958ರಲ್ಲಿ ಭಾರತದ ವೀಸಾ ಪಡೆದಿದ್ದಳು. ಈಗ ಅವಳಿಗೆ ವಯಸ್ಸಾಗಿದ್ದು, ಮಾತಾಡುವ ಸ್ಥಿತಿಯಲ್ಲಿಯೂ ಇಲ್ಲ. ಬಿಹಾರದ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿತ್ತು. ಈ ಕುರಿತು ಕೇಂದ್ರ ಗೃಹ ಸಚಿವಾಲಯ ತನಿಖೆ ನಡೆಸಿ, ನೋಟಿಸ್ ನೀಡಿದೆ. ಅದರಂತೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಪ್ರಕ್ರಿಯೆ ನಡೆದಿದೆ. ಇವರ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತಚೋರಿ ಬಳಿಕ ಬಿಜೆಪಿಯಿಂದ ಅಧಿಕಾರ ಚೋರಿ: ಖರ್ಗೆ
ಪಿಟಿಐ ನವದೆಹಲಿ‘ಮತಕಳ್ಳತನ ಮಾಡಿದ ಬಳಿಕ ಇದೀಗ ಬಿಜೆಪಿ, ತನ್ನ ವಿರೋಧಿ ಸರ್ಕಾರಗಳನ್ನು 30 ದಿನಗಳಲ್ಲಿ ಉರುಳಿಸಲು ಅಧಿಕಾರ ಕಳ್ಳತನಕ್ಕೆ (ಸತ್ತಾ ಚೋರಿ) ಕಾಯ್ದೆ ತಂದಿದೆ‘ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಸಭೆಯೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಅಧಿವೇಶನದಲ್ಲಿ ಮಂಡಿಸಿದ ಮಂತ್ರಿಗಳು 30 ದಿನ ಜೈಲಿನಲ್ಲಿದ್ದರೆ ಅವರನ್ನು ವಜಾಗೊಳಿಸುವ ಮಸೂದೆಯನ್ನು ತರಾಟೆಗೆ ತೆಗೆದುಕೊಂಡರು.‘ಈ ಕಾನೂನು ನಾಗರಿಕರು ಚುನಾಯಿತ ಸರ್ಕಾರವನ್ನು ತೆಗೆದುಹಾಕುವ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಆ ಅಧಿಕಾರವನ್ನು ಇ.ಡಿ. ಸಿಬಿಐನಂತಹ ಸಂಸ್ಥೆಗಳಿಗೆ ನೀಡುತ್ತದೆ. ಇದು ಪ್ರಜಾಪ್ರಭುತ್ವದ ಮೇಲೆ ಬುಲ್ಡೋಜರ್ ಓಡಿಸುವ ರೀತಿಯಿದೆ’ ಎಂದು ವಾಗ್ದಾಳಿ ನಡೆಸಿದರು.
ಬಿಹಾರ ಮತಪಟ್ಟಿ ಪರಿಷ್ಕರಣೆ: ಶೇ.98ರಷ್ಟು ದಾಖಲೆ ಸ್ವೀಕಾರನವದೆಹಲಿ: ಬಿಹಾರ ಮತಪಟ್ಟಿ ಪರಿಷ್ಕರಣೆಯ ಭಾಗವಾಗಿ ಪ್ರಕಟಿಸಿರುವ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇನ್ನು 8 ದಿನಗಳು ಬಾಕಿ ಇದೆ. ಇದರ ನಡುವೆ ಈವರೆಗೆ ಶೇ.98.2 ರಷ್ಟು ಮತದಾರರ ದಾಖಲೆಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಜೂ.24 ರಿಂದ ಆ.24ರ ತನಕ ಅವಧಿಯಲ್ಲಿ ನಿತ್ಯ ಶೇ.1.64 ಸರಾಸರಿಯಲ್ಲಿ ಶೇ.98.2ರಷ್ಟು ಮಂದಿ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಕೆ ಮಾಡಿದ್ದಾರೆ. ಸಲ್ಲಿಕೆಗೆ ಸೆ.1 ಕಡೆಯ ದಿನ. ಅಂತಿಮ ದಿನಕ್ಕೆ ಇನ್ನು 8 ದಿನ ಉಳಿದಿದ್ದು ಶೇ.1.8ರಷ್ಟು ಮತದಾರರು ದಾಖಲೆ ಸಲ್ಲಿಸುವುದು ಬಾಕಿಯಿದೆ.
ಆಕ್ಷೇಪಣೆಯ ಸಂದರ್ಭದಲ್ಲಿ ಆಯೋಗ ಕರಡುಪಟ್ಟಿಯಲ್ಲಿನ ತಪ್ಪುಗಳನ್ನು ಸರಿಪಡಿಸುವುದು ಮಾತ್ರವಲ್ಲದೇ ಮತದಾರರು ಈ ಹಿಂದೆ ಒದಗಿಸದ ದಾಖಲೆಗಳನ್ನು ಸಲ್ಲಿಸಲು ಕೂಡ ಅವಕಾಶ ನೀಡಲಾಗಿದೆ.
ಬಿಹಾರ ಮತಪಟ್ಟಿ ಪರಿಷ್ಕರಣೆ: ಶೇ.98ರಷ್ಟು ದಾಖಲೆ ಸ್ವೀಕಾರ
ನವದೆಹಲಿ: ಬಿಹಾರ ಮತಪಟ್ಟಿ ಪರಿಷ್ಕರಣೆಯ ಭಾಗವಾಗಿ ಪ್ರಕಟಿಸಿರುವ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇನ್ನು 8 ದಿನಗಳು ಬಾಕಿ ಇದೆ. ಇದರ ನಡುವೆ ಈವರೆಗೆ ಶೇ.98.2 ರಷ್ಟು ಮತದಾರರ ದಾಖಲೆಗಳನ್ನು ಸ್ವೀಕರಿಸಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.ಈ ಹಿನ್ನೆಲೆಯಲ್ಲಿ ಜೂ.24 ರಿಂದ ಆ.24ರ ತನಕ ಅವಧಿಯಲ್ಲಿ ನಿತ್ಯ ಶೇ.1.64 ಸರಾಸರಿಯಲ್ಲಿ ಶೇ.98.2ರಷ್ಟು ಮಂದಿ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಕೆ ಮಾಡಿದ್ದಾರೆ. ಸಲ್ಲಿಕೆಗೆ ಸೆ.1 ಕಡೆಯ ದಿನ. ಅಂತಿಮ ದಿನಕ್ಕೆ ಇನ್ನು 8 ದಿನ ಉಳಿದಿದ್ದು ಶೇ.1.8ರಷ್ಟು ಮತದಾರರು ದಾಖಲೆ ಸಲ್ಲಿಸುವುದು ಬಾಕಿಯಿದೆ.
ಆಕ್ಷೇಪಣೆಯ ಸಂದರ್ಭದಲ್ಲಿ ಆಯೋಗ ಕರಡುಪಟ್ಟಿಯಲ್ಲಿನ ತಪ್ಪುಗಳನ್ನು ಸರಿಪಡಿಸುವುದು ಮಾತ್ರವಲ್ಲದೇ ಮತದಾರರು ಈ ಹಿಂದೆ ಒದಗಿಸದ ದಾಖಲೆಗಳನ್ನು ಸಲ್ಲಿಸಲು ಕೂಡ ಅವಕಾಶ ನೀಡಲಾಗಿದೆ.
ಬೈಕ್ ಸವಾರಿ ಮಾಡಿದ ರಾಹುಲ್‌ಗೆ ಮುತ್ತಿಕ್ಕಿದ ಯುವಕ!
ಪೂರ್ಣಿಯಾ (ಬಿಹಾರ): ಮತ ಅಧಿಕಾರ ಯಾತ್ರೆಯ ಅಂಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಭಾನುವಾರ ಬಿಹಾರದ ಪೂರ್ಣಿಯಾ ಜಿಲ್ಲೆಯ ಅರಾರಿಯಾದ ಬೀದಿಗಳಲ್ಲಿ ಬುಲೆಟ್ ಬೈಕ್ ಸವಾರಿ ಮಾಡಿ ಗಮನ ಸೆಳೆದರು. ಈ ವೇಳೆ ಯುವಕನೊಬ್ಬ ರಾಹುಲ್‌ಗೆ ಮುತ್ತಿಟ್ಟ ಘಟನೆ ನಡೆದಿದೆ.ಯಾತ್ರೆ ಅರಾರಿಯಾ ಪ್ರವೇಶಿಸುತ್ತಿದ್ದಂತೆ ಇಬ್ಬರನ್ನೂ ನೋಡಲು ಜನಸಾಗರ ನೆರೆದಿತ್ತು. ಈ ವೇಳೆ ಒಬ್ಬ ಯುವಕ, ಭದ್ರತೆ ದಾಟಿ ಬಂದು, ಬೈಕಲ್ಲಿ ಸಾಗುತ್ತಿದ್ದ ರಾಹುಲ್‌ಗೆ ಮುತ್ತಿಟ್ಟ ಹಾಗೂ ತಬ್ಬಿಕೊಂಡ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ತಳ್ಳಿದರು. ಮತ್ತೆ ಆತ ರಾಹುಲ್ ಕಡೆ ನುಗ್ಗಲು ಯತ್ನಿಸಿದಾಗ ಕಪಾಳಮೋಕ್ಷ ಮಾಡಿದರು.
ಬಡವರ ಮತಹಕ್ಕು ಕಸಿಯಲು ಎನ್‌ಡಿಎಗೆ ಬಿಡಲ್ಲ: ರಾಹುಲ್
ಅರಾರಿಯಾ (ಬಿಹಾರ) : ಬಿಹಾರ ಮತಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ‘ಎನ್‌ಡಿಎ ಸರ್ಕಾರ ಮತಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬಡವರ ಮತಹಕ್ಕನ್ನು ಕಸಿಯುತ್ತಿದೆ’ ಎಂದು ಪುನರುಚ್ಚರಿಸಿದ್ದಾರೆ.
ಇಲ್ಲಿ ನಡೆದ ‘ಮತ ಅಧಿಕಾರ ಯಾತ್ರೆ’ಯಲ್ಲಿ ಪಾಲ್ಗೊಂಡ ವೇಳೆ ಮಾತನಾಡಿದ ಅವರು, ‘ನರೇಂದ್ರ ಮೋದಿ ಸರ್ಕಾರ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದ ಬಳಿಕ ಇದೀಗ ಚುನಾವಣಾ ಆಯೋಗದ ಸಹಾಯದೊಂ ದಿಗೆ ಬಡವರ ಮತದಾನದ ಹಕ್ಕನ್ನು ಮತಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಕದಿಯುತ್ತಿದ್ದಾರೆ. ಇಂಡಿಯಾ ಕೂಟ ಬಿಹಾರದಲ್ಲಿ ಈ ರೀತಿ ಆಗಲು ಬಿಡುವುದಿಲ್ಲ. ಮತಪಟ್ಟಿ ಪರಿಷ್ಕರಣೆ ಅಸಂವಿಧಾನಿಕ. ಬಿಹಾರದ ಜನತೆ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಮತ್ತು ಅವರ ಮೈತ್ರಿಕೂಟಕ್ಕೆ ಸೂಕ್ತವಾದ ಉತ್ತರ ನೀಡಬೇಕು’ ಎಂದರು.