ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೆಚ್ಚಿನ ಭಾಗಗಳಲ್ಲಿ ಬಿಸಿಲಿನ ಅಲೆ ಮುಂದುವರಿದಿದ್ದು, ಶನಿವಾರ ದಾದುವಿನಲ್ಲಿ ದಾಖಲೆಯ 51.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೆಚ್ಚಿನ ಭಾಗಗಳಲ್ಲಿ ಬಿಸಿಲಿನ ಅಲೆ ಮುಂದುವರಿದಿದ್ದು, ಶನಿವಾರ ದಾದುವಿನಲ್ಲಿ ದಾಖಲೆಯ 51.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಪಾಕ್‌ ಹವಾಮಾನ ಇಲಾಖೆ ದತ್ತಾಂಶದ ಪ್ರಕಾರ, ದಾದುವಿನಲ್ಲಿ 2016ರ ಮೇ 18 ರಂದು 51.4 ಡಿಗ್ರಿ ಸೆ. ಅತ್ಯಧಿಕ ತಾಪಮಾನ ದಾಖಲಾಗಿತ್ತು. 10 ವರ್ಷಗಳ ಬಳಿಕ ಆ ದಾಖಲೆ ಮುರಿದಿದೆ. ಜಕೋಬಾಬಾದ್‌, ಶಹೀದ್‌ ಬೆನಜಿರಾಬಾದ್‌, ಲರ್ಕಾನಾ, ಮೊಹೆಂಜೊದಾರೊ ಮೊದಲಾದ ಪ್ರದೇಶಗಳಲ್ಲೂ 50 ಡಿಗ್ರಿ ಸೆ. ತಾಪಮಾನ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.