ಸಾರಾಂಶ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ನಂತರ ’ಲಿಬರ್ಟಿ ಬಾಲ್’ನಲ್ಲಿ ನಡೆದ ನಡೆದ ಸಮಾರಂಭದಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಪ್ರತ್ಯಕ್ಷನಾಗಿದ್ದಾನೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ನಂತರ ’ಲಿಬರ್ಟಿ ಬಾಲ್’ನಲ್ಲಿ ನಡೆದ ನಡೆದ ಸಮಾರಂಭದಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಪ್ರತ್ಯಕ್ಷನಾಗಿದ್ದಾನೆ.
ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯಾರೂ ಈ ವಿಡಿಯೋ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.ವಿಡಿಯೋದಲ್ಲಿ ಟ್ರಂಪ್ ಅವರ ವೇದಿಕೆ ಎಡ ಭಾಗದಲ್ಲಿ ಪನ್ನೂನ್ ಮತ್ತು ಇನ್ನಿತರರು ಹಾಜರಿದ್ದರು. ಟ್ರಂಪ್ ಮತ್ತು ಅಲ್ಲಿದ್ದ ಎಲ್ಲರೂ ಅಮೆರಿಕ ಅಮೆರಿಕ ಎಂದು ಘೋಷಣೆ ಕೂಗುತ್ತಿದ್ದರೆ, ಇತ್ತ ಪನ್ನೂನ್ ಮಾತ್ರ ‘ಖಲಿಸ್ತಾನ್ ಜಿಂದಾಬಾದ್, ಖಲಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ ದೃಶ್ಯ ವಿಡಿಯೋದಲ್ಲಿದೆ.
ಪನ್ನುಗೆ ಈ ಸಮಾರಂಭಕ್ಕೆ ಆಹ್ವಾನ ಇರಲಿಲ್ಲ. ಆದರೆ ಆತ ಬೇರೊಬ್ಬರ ಪಾಸ್ ಪಡೆದು ಸಮಾರಂಭಕ್ಕೆ ಹೋಗಿದ್ದ ಎಂದು ಹೇಳಲಾಗಿದೆ. ಈ ವಿಡಿಯೋ ಭಾರತದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ಪನ್ನು ಕೆನಡಾ ಹಾಗೂ ಅಮೆರಿಕ- ಎರಡೂ ದೇಶಗಳ ದ್ವಿಪೌರತ್ವ ಪಡೆದುರುವ ಪ್ರಜೆಯಾಗಿದ್ದಾನೆ.