ವಯನಾಡಿನಿಂದ ರಾಹುಲ್‌ ಸ್ಪರ್ಧೆ: ಡಿ. ರಾಜಾ ಆಕ್ಷೇಪ

| Published : Mar 10 2024, 01:31 AM IST

ಸಾರಾಂಶ

ಕಾಂಗ್ರೆಸ್‌ ಪಕ್ಷದ ಪ್ರಬಲ ನಾಯಕರಾದ ರಾಹುಲ್‌ ಗಾಂಧಿ ಅವರು ಲೋಕಸಭೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಗೆ ನೇರವಾಗಿ ಸವಾಲು ಹಾಕುವ ಕ್ಷೇತ್ರದಿಂದ ಸ್ಪರ್ಧಿಸಬೇಕು.

ನವದೆಹಲಿ: ಕಾಂಗ್ರೆಸ್‌ ಪಕ್ಷದ ಪ್ರಬಲ ನಾಯಕರಾದ ರಾಹುಲ್‌ ಗಾಂಧಿ ಅವರು ಲೋಕಸಭೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಗೆ ನೇರವಾಗಿ ಸವಾಲು ಹಾಕುವ ಕ್ಷೇತ್ರದಿಂದ ಸ್ಪರ್ಧಿಸಬೇಕು. ಅದರ ಬದಲು ಕೇರಳದ ವಯನಾಡಿನಿಂದ ಸ್ಪರ್ಧಿಸಬಾರದು ಎಂದು ಕಮ್ಯುನಿಸ್ಟ್‌ ಪಾರ್ಟಿ ಆಫ್ ಇಂಡಿಯಾ (ಸಿಪಿಎ) ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ.

ರಾಹುಲ್‌ ಹೆಸರು ವಯನಾಡಿನಿಂದ ಘೋಷಣೆ ಆದ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿದ ರಾಜಾ, ‘ಸಿಪಿಐ ಮತ್ತು ಎಲ್‌ಡಿಎಫ್‌ ಮೂರ್ತಿ ಅಭ್ಯರ್ಥಿಯಾಗಿ ನ್ನ ಪತ್ನಿ ಅನ್ನಿ ರಾಜಾ ವಯನಾಡ್‌ನಿಂದ ಸ್ಪರ್ಧಿಸಲಿದ್ದಾರೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ನಮ್ಮ ಜತೆ ಸ್ನೇಹ ಹೊಂದಿರುವ ರಾಹುಲ್‌ ಗಾಂಧಿ ಅವರು ಇಲ್ಲಿ ಸ್ಪರ್ಧಿಸಬಾರದು. ಅದರ ಬದಲು ಬಿಜೆಪಿಗೆ ಪೈಪೋಟಿ ನೀಡುವ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿದರೆ ಒಳ್ಳೆಯದು’ ಎಂದರು.

‘ಒಂದೇ ಕ್ಷೇತ್ರದಿಂದ ಇಂಡಿಯಾ ಕೂಟದ ಮೈತ್ರಿಯಿಂದ ಇಬ್ಬರು ಸ್ಪರ್ಧೆ ನಡೆಸಿದರೆ ಹೇಗೆ? ಆದ್ದರಿಂದ ರಾಹುಲ್‌ ಗಾಂಧಿ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿದರೆ ಉತ್ತಮ’ ಎಂದರು.