- ಛತ್ತೀಸ್‌ಗಢದಲ್ಲಿ ಕಾಳಸಂತೆಯಲ್ಲಿ 741 ಎಲ್‌ಪಿಜಿ ಜಪ್ತಿ -ಕೇರಳದಲ್ಲಿ ಎಲ್‌ಪಿಜಿ ಬಿಕ್ಕಟ್ಟು । ತವರಿಗೆ ವಲಸಿಗರು ವಾಪಸ್
- ಕೋಲ್ಕತಾದಲ್ಲಿ ಮುಂಜಾನೆಯಿಂದಲೇ ಕ್ಯೂ- ಹೋಟೆಲ್‌ಗಳಲ್ಲಿ ಇಂಡಕ್ಷನ್, ಸೌದೆಗೆ ಡಿಮ್ಯಾಂಡ್‌ನವದೆಹಲಿ: ದೇಶದಲ್ಲಿ ಅಡುಗೆ ಅನಿಲ ಕೊರತೆ ಮುಂದುವರೆದಿದೆ. ಹೋಟೆಲ್‌ಗಳಲ್ಲಿ ಇಂಡಕ್ಷನ್, ಸೌದೆ ಒಲೆಗೆ ಬೇಡಿಕೆ ಹೆಚ್ಚಾಗಿದ್ದರೆ, ಗ್ಯಾಸ್ ಏಜೆನ್ಸಿಗಳ ಮುಂದೆ ಜನರ ಕಿ.ಮೀ. ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಶನಿವಾರವೂ ಸರ್ವೇ ಸಾಮಾನ್ಯ ಎನ್ನುವಂತಿತ್ತು. ವಲಸೆ ಕಾರ್ಮಿಕರಿಗೂ ಇದರ ಬಿಸಿ ತಟ್ಟಿದೆ.ಕೋಲ್ಕತಾದಲ್ಲಿ ಬೆಳಿಗ್ಗೆಯಿಂದಲೇ ಸರತಿ:
ಪಶ್ಚಿಮ ಬಂಗಾಳದಲ್ಲಿ ಎಲ್‌ಪಿಜಿ ಕೊರತೆಯಿಂದ ಆತಂಕಕ್ಕೆ ಒಳಗಾಗಿರುವ ಜನರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಮತ್ತೊಂದೆಡೆ ಅಕ್ರಮ ದಾಸ್ತಾನು ತಡೆಯಲು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಹಲವಾರು ವಿತರಣಾ ಕೇಂದ್ರ, ಶೇಖರಣಾ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಇದರ ನಡುವೆ ಕೆಲವು ಆಟೋ ಚಾಲಕರು ದುಬಾರಿ ದರ ವಿಧಿಸುತ್ತಿರುವ ಆರೋಪವೂ ಕೇಳಿ ಬಂದಿದೆ. ಚೆನ್ನೈನಲ್ಲಿ ಇಂಡಕ್ಷನ್, ಸೌದೆಗೆ ಡಿಮ್ಯಾಂಡ್:ತಮಿಳುನಾಡಿನ ರಾಜಧಾನಿ ಚೆನ್ನೈ ಸೇರಿದಂತೆ ಹಲವು ಹೋಟೆಲ್‌ಗಳು ವಾಣಿಜ್ಯ ಎಲ್‌ಪಿಜಿ ಬಳಕೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಈಗಾಗಲೇ ಹಲವು ಹೋಟೆಲ್‌ಗಳು ಇಂಡಕ್ಷನ್, ಸೌದೆ ಒಲೆಗಳ ಮೊರೆ ಹೋಗಿವೆ. ಇನ್ನು ಕೆಲವು ಹೋಟೆಲ್‌ಗಳು ಮೆನುಗಳ ಕಡಿತಗೊಳಿಸಿವೆ.
ಛತ್ತೀಸ್‌ಗಢದಲ್ಲಿ 741 ಎಲ್‌ಪಿಜಿ ಜಪ್ತಿ
ಒಂದೆಡೆ ಎಲ್‌ಪಿಜಿ ಕೊರತೆ ಎದುರಾಗಿದ್ದರೆ, ಮತ್ತೊಂದೆಡೆ ಅದನ್ನೇ ಲಾಭವಾಗಿ ಬಳಸಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಛತ್ತೀಸ್‌ಗಢದಲ್ಲಿ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ 102 ಕಡೆಗಳಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 741 ಎಲ್‌ಪಿಜಿ ವಶಪಡಿಸಿಕೊಂಡಿದ್ದಾರೆ.ಕೇರಳದಲ್ಲಿ ವಲಸೆ ಕಾರ್ಮಿಕರು ತವರಿಗೆ:
ಕೇರಳ ಚುನಾವಣೆ, ರಂಜಾನ್ ಹೊಸ್ತಿಲಿನಲ್ಲಿ ಉಂಟಾಗಿರುವ ಎಲ್‌ಪಿಜಿ ಅಭಾವ ಪರಿಣಾಮ ಇಂಧನ ಕಾರ್ಮಿಕರ ಮೇಲೆಯೂ ತಟ್ಟಿದೆ. ಈಗಾಗಲೇ ಹಲವು ಹೋಟೆಲ್‌ಗಳು ಬಂದ್ ಅಗಿರುವುದರಿಂದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನವರು ಬೇರೆ ರಾಜ್ಯಗಳಿಂದ ಅದರಲ್ಲಿಯೂ ಪಶ್ಚಿಮ ಬಂಗಾಳದಿಂದ ಬಂದವರೇ ಇದ್ದಾರೆ. ಅವರು ಇದೀಗ ಹೋಟೆಲ್ ಬಂದ್ ಆಗಿರುವ ಪರಿಣಾಮ ತಮ್ಮ ಊರಿಗೆ ಮರಳುತ್ತಿದ್ದಾರೆ. ಅವರೆಲ್ಲರೂ ಕೇರಳದಿಂದ ಹೊರ ಹೋದರೆ ಚುನಾವಣೆ ಮುಗಿಯುವ ತನಕವೂ ಹಿಂದಿರುಗುವುದಿಲ್ಲ ಎನ್ನುವ ಆತಂಕ ಮಾಲೀಕರದ್ದು. ಹೀಗಾಗಿ ಕಾರ್ಮಿಕರನ್ನು ಇಲ್ಲಿಯೇ ಉಳಿಸಿಕೊಳ್ಳಲು ಮಾಲೀಕರು ಹರಸಾಹಸ ಪಡುತ್ತಿದ್ದಾರೆ.========
ಬಾಕ್ಸ್ವಿದ್ಯುತ್ ಒಲೆ ಬಳಸುವ ಹೋಟೆಲ್‌ಗಳಿಗೆ ತ.ನಾಡಿನಲ್ಲಿ 2 ರು. ವಿದ್ಯುತ್ ಸಬ್ಸಿಡಿ
ಚೆನ್ನೈ: ಹೋಟೆಲ್‌ಗಳು ಬಂದ್ ಅಗಿ ಜನರಿಗೆ ಆಗುವ ಸಮಸ್ಯೆ ತಡೆಯಲು ತಮಿಳುನಾಡು ಸರ್ಕಾರ ಹೊಸ ಉಪಾಯವೊಂದನ್ನು ಮಾಡಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್‌ಗಳ ಬದಲಿಗೆ ವಿದ್ಯುತ್ ಒಲೆಗಳನ್ನು ಬಳಸುವ ರೆಸ್ಟೋರೆಂಟ್, ಹೋಟೆಲ್, ಟೀ ಅಂಗಡಿಗಳಿಗೆ ಪ್ರತಿ ಯೂನಿಟ್ ವಿದ್ಯುತ್‌ಗೆ 2 ರು. ಸಬ್ಸಿಡಿ ನೀಡುವುದಾಗಿ ಘೋಷಿಸಿದೆ.‘ಎಲ್ಲಿಯವರೆಗೆ ಎಲ್‌ಪಿಜಿ ಅಭಾವ ಇರುತ್ತದೋ ಅಲ್ಲಿಯವರೆಗೆ ಸಬ್ಸಿಡಿ ಯೋಜನೆ ಜಾರಿಯಲ್ಲಿರಲಿದೆ’ ಎಂದು ಸರ್ಕಾ ಹೇಳಿದೆ.