ಐಟಿ ಮರುಪರಿಶೀಲನೆ ರದ್ದು ಕೋರಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿ ವಜಾ

| Published : Mar 29 2024, 12:47 AM IST / Updated: Mar 29 2024, 08:36 AM IST

ಐಟಿ ಮರುಪರಿಶೀಲನೆ ರದ್ದು ಕೋರಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿ ವಜಾ
Share this Article
  • FB
  • TW
  • Linkdin
  • Email

ಸಾರಾಂಶ

ಆದಾಯ ತೆರಿಗೆ ಇಲಾಖೆಯಿಂದ ಪಕ್ಷದ 2017 ರಿಂದ 2021ರವರೆಗಿನ ವಾರ್ಷಿಕ ಮಾಹಿತಿ ಮರುಪರಿಶೀಲನೆ ಮಾಡುವುದನ್ನು ತಡೆಯಬೇಕು

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ ಪಕ್ಷದ 2017 ರಿಂದ 2021ರವರೆಗಿನ ವಾರ್ಷಿಕ ಮಾಹಿತಿ ಮರುಪರಿಶೀಲನೆ ಮಾಡುವುದನ್ನು ತಡೆಯಬೇಕು ಎಂದು ಕೋರಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾ ಮಾಡಿದೆ. 

ಇದರೊಂದಿಗೆ ಕಾಂಗ್ರೆಸ್‌ಗೆ ಈ ವಿಚಾರದಲ್ಲಿ ಮತ್ತೊಮ್ಮೆ ಹಿನ್ನಡೆ ಆದಂತಾಗಿದೆ. 2017 ರಿಂದ 2021ರವರೆಗೆ 4 ಆರ್ಥಿಕ ಸಾಲುಗಳ ಆದಾಯ ತೆರಿಗೆ ಮಾಹಿತಿಯನ್ನು ಇಲಾಖೆ ವತಿಯಿಂದ ಮರುಪರಿಶೀಲನೆ ಆರಂಭಿಸಲಾಗಿದ್ದು, ಅದನ್ನು ವಜಾ ಮಾಡುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಇದಕ್ಕೂ ಮೊದಲು ನ್ಯಾಯಾಲಯವು 2015-17ರವರೆಗಿನ ಮಾಹಿತಿ ಮರುಪರಿಶೀಲನೆಗೂ ತಡೆ ನೀಡಲು ಕೋರ್ಟ್‌ ನಿರಾಕರಿಸಿತ್ತು.