ಸಾರಾಂಶ
ದೇಶಾದ್ಯಂತ ಏಕರೂಪ ಸಮಯಪಾಲನೆ ಮತ್ತು ಪ್ರದರ್ಶನಕ್ಕಾಗಿ ಕೇಂದ್ರ ಸರ್ಕಾರ ಕಾನೂನು ಮಾಪನ ವಿಜ್ಞಾನ ಅಧಿನಿಯಮ 2025 ಅನ್ನು ಸಿದ್ಧಪಡಿಸಿದೆ. ಈ ನೀತಿಯು ದೇಶದ ಎಲ್ಲ ಸರ್ಕಾರಿ, ಖಾಸಗಿ, ವಾಣಿಜ್ಯ, ಶೈಕ್ಷಣಿಕ, ಕಾನೂನು ಸಂಸ್ಥೆಗಳಲ್ಲಿ ಒಂದೇ ರೂಪದ ಸಮಯ ಪ್ರದರ್ಶನ ಕಡ್ಡಾಯಗೊಳಿಸಲಿದೆ.
ನವದೆಹಲಿ: ದೇಶಾದ್ಯಂತ ಏಕರೂಪ ಸಮಯಪಾಲನೆ ಮತ್ತು ಪ್ರದರ್ಶನಕ್ಕಾಗಿ ಕೇಂದ್ರ ಸರ್ಕಾರ ಕಾನೂನು ಮಾಪನ ವಿಜ್ಞಾನ ಅಧಿನಿಯಮ 2025 ಅನ್ನು ಸಿದ್ಧಪಡಿಸಿದೆ. ಈ ನೀತಿಯು ದೇಶದ ಎಲ್ಲ ಸರ್ಕಾರಿ, ಖಾಸಗಿ, ವಾಣಿಜ್ಯ, ಶೈಕ್ಷಣಿಕ, ಕಾನೂನು ಸಂಸ್ಥೆಗಳಲ್ಲಿ ಒಂದೇ ರೂಪದ ಸಮಯ ಪ್ರದರ್ಶನ ಕಡ್ಡಾಯಗೊಳಿಸಲಿದೆ. ಈ ಕರಡು ನೀತಿಗೆ ಪ್ರತಿಕ್ರಿಯೆ ಕಳಿಸಲು ಫೆ.14ರವರೆಗೆ ಕಾಲಾವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ.
ನೀತಿಯಲ್ಲೇನಿದೆ?ದಿನಾಂಕ ಪ್ರದರ್ಶನಕ್ಕೆ ದಿನ, ತಿಂಗಳು, ವರ್ಷ ಮಾದರಿ ಜೊತೆಗೆ ಸಮಯಕ್ಕೆ ಗಂಟೆ, ನಿಮಿಷ, ಸೆಕೆಂಡು ಮಾದರಿಯನ್ನು ನೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ.
ಇವರಿಗೆ ಅನ್ವಯಿಸುವುದಿಲ್ಲ:ಬಾಹ್ಯಾಕಾಶ ಸಂಶೋಧನೆ, ಖಗೋಳಶಾಸ್ತ್ರ, ವೈಜ್ಞಾನಿಕ ಸಂಶೋಧನೆ, ನಾವೀಕರು ಮತ್ತು ವಿಮಾನಯಾನ ಕ್ಷೇತ್ರವನ್ನು ಇದರಿಂದ ಹೊರತುಪಡಿಸಲಾಗಿದೆ. ಈ ಸಂಸ್ಥೆಗಳು ದೇಶೀಯ ಜೊತೆಗೆ ವಿದೇಶಿ ಸಮಯವನ್ನು ಬಳಸಬಹುದಾಗಿದೆ.
ಭಾರತದ ಸಮಯ ವಲಯ:ಭಾರತವು ಐಎಸ್‌ಟಿ ಸಮಯ ಮಾದರಿಯನ್ನು ಬಳಸುತ್ತಿದ್ದು, +5:30 ಬಳಸುತ್ತಿದೆ. ಭಾರತದಲ್ಲಿ ಸಮಯವನ್ನು ಭಾರತೀಯ ಸಂಶೋಧನೆ ಮತ್ತು ಕೈಗಾರಿಕಾ ಮಂಡಳಿಯ ರಾಷ್ಟ್ರೀಯ ಭೌತಿಕ ಸಂಸ್ಥೆ (ಸಿಎಸ್‌ಐಆರ್-ಎನ್‌ಪಿಐ) ನಿರ್ವಹಿಸುತ್ತಿದೆ. ಇದು ಪ್ರತಿ ಸೆಕೆಂಡುಗಳನ್ನು ಅಂತಾರಾಷ್ಟ್ರೀಯ ಮಾಪಕದ ಆಧಾರದ ಮೇಲೆ ಸಮಯ ಪಾಲನೆ ಮಾಡಲಿದೆ.
ಅನುಕೂಲವೇನು?:ಏಕರೂಪ ಸಮಯ ಪಾಲನೆಯಿಂದಾಗಿ ಸೈಬರ್ ಅಪರಾಧ ತಡೆಗಟ್ಟುವಿಕೆ, ಪರಿಪೂರ್ಣ ಸಮಯಪಾಲನೆ ಸಾಧ್ಯವಾಗಲಿದೆ.