ಅಹಮದಾಬಾದ್: ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಏರಿಂಡಿಯಾದ ವಿಮಾನವು, ರನ್‌ವೇನ ಸಮೀಪವೇ ಇದ್ದ ಮೆಡಿಕಲ್ ಕಾಲೇಜಿಗೆ ಅಪ್ಪಳಿಸಿ ಬೆಂಕಿಯುಂಡೆಯಾಗಿತ್ತು. ಕೆಲವೇ ಕ್ಷಣದಲ್ಲಿ ನಡೆದ ಈ ಘಟನೆಯು, ವಿಮಾನದಲ್ಲಿದ್ದವರ ಜತೆಗೆ ಕಟ್ಟಡದಲ್ಲಿದ್ದ ಹಲವು ವೈದ್ಯರ ಪ್ರಾಣವನ್ನೂ ಆಹುತಿ ಪಡೆದಿದೆ. ಅದು ಮಧ್ಯಾಹ್ನದ ಹೊತ್ತಾಗಿದ್ದರಿಂದ ಬಿಜೆ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳೆಲ್ಲ ಊಟಕ್ಕೆ ಕುಳಿತಿದ್ದರು. ಇನ್ನೇನು ಅನ್ನಕ್ಕೆ ಕೈ ಇಡಬೇಕು ಎನ್ನುವಷ್ಟರಲ್ಲಿ ವೇಗವಾಗಿ ಹಾರಿಬಂದ ವಿಮಾನ ಆ ಕಟ್ಟಡಕ್ಕೆ ಅಪ್ಪಳಿಸಿದೆ. ಇದರಿಂದ ಅಲ್ಲಿದ್ದ ಬಹುತೇಕರು ಗಂಭೀರವಾಗಿ ಗಾಯಗೋಂಡಿದ್ದಾರೆ. ಹಲವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಭೋಜನ ಸ್ಥಳದಲ್ಲಿ ಊಟವಿರುವ ತಟ್ಟೆಗಳು ಹಾಗೆಯೇ ಇರುವ, ನೆಲದಲ್ಲಿ ಬಿದ್ದಿರುವ ಸುಟ್ಟ ಶವಗಳ ದೃಶ್ಯಗಳು ಮನ ಕಲಕುವಂತಿವೆ.
ತಟ್ಟೆಯಲ್ಲಿ ಅರ್ಧ ತಿಂದ ಊಟ, ನೆಲದಲ್ಲಿ ಬಿದ್ದ ಸುಟ್ಟ ಶವಗಳು
ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಏರಿಂಡಿಯಾದ ವಿಮಾನವು, ರನ್‌ವೇನ ಸಮೀಪವೇ ಇದ್ದ ಮೆಡಿಕಲ್ ಕಾಲೇಜಿಗೆ ಅಪ್ಪಳಿಸಿ ಬೆಂಕಿಯುಂಡೆಯಾಗಿತ್ತು. ಕೆಲವೇ ಕ್ಷಣದಲ್ಲಿ ನಡೆದ ಈ ಘಟನೆಯು, ವಿಮಾನದಲ್ಲಿದ್ದವರ ಜತೆಗೆ ಕಟ್ಟಡದಲ್ಲಿದ್ದ ಹಲವು ವೈದ್ಯರ ಪ್ರಾಣವನ್ನೂ ಆಹುತಿ ಪಡೆದಿದೆ.
Latest Videos
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.