3 ದಿನಗಳ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಜೋರ್ಡಾನ್‌ ರಾಜಧಾನಿ ಅಮ್ಮಾನ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಜೋರ್ಡಾನ್‌ ಪ್ರಧಾನಿ ಜಾಫರ್‌ ಹಸ್ಸನ್‌ ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಜೋರ್ಡಾನ್‌ ಭದ್ರತಾ ಪಡೆಗಳಿಂದ ಹಾಗೂ ಭಾರತೀಯ ಮೂಲದವರಿಂದ ಔಪಚಾರಿಕ ಸ್ವಾಗತವೂ ದೊರೆಯಿತು.

ಅರಸನ ಜತೆ ದ್ವಿಪಕ್ಷೀಯ ಮಾತುಕತೆ

ಅಮ್ಮಾನ್‌ (ಜೋರ್ಡಾನ್‌): 3 ದಿನಗಳ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಜೋರ್ಡಾನ್‌ ರಾಜಧಾನಿ ಅಮ್ಮಾನ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಜೋರ್ಡಾನ್‌ ಪ್ರಧಾನಿ ಜಾಫರ್‌ ಹಸ್ಸನ್‌ ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಜೋರ್ಡಾನ್‌ ಭದ್ರತಾ ಪಡೆಗಳಿಂದ ಹಾಗೂ ಭಾರತೀಯ ಮೂಲದವರಿಂದ ಔಪಚಾರಿಕ ಸ್ವಾಗತವೂ ದೊರೆಯಿತು. ಪ್ರಧಾನಿ ಮೋದಿ ಜೋರ್ಡಾನ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಆರಂಭವಾಗಿ 75 ವರ್ಷಗಳು ಪೂರ್ಣಗೊಂಡ ವೇಳೆಯಲ್ಲೇ ಮೋದಿಯವರ ಭೇಟಿ ಮಹತ್ವ ಪಡೆದಿದೆ. ಮೋದಿಯವರು ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ನಂತರ ನಿಯೋಗ ಮಟ್ಟದ ಸಭೆ ನಡೆಯಲಿದೆ.ಮಂಗಳವಾರ, ಮೋದಿ ಮತ್ತು ಜೋರ್ಡಾನ್‌ ದೊರೆ ಭಾರತ-ಜೋರ್ಡಾನ್ ವ್ಯಾಪಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದು, ಎರಡೂ ದೇಶಗಳ ಪ್ರಮುಖ ಉದ್ಯಮಿಗಳು ಭಾಗವಹಿಸಲಿದ್ದಾರೆ. ನಂತರ ಮೋದಿಯವರು ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಐತಿಹಾಸಿಕ ನಗರಿ ಪೆಟ್ರಾಗೂ ಭೇಟಿ ನೀಡಲಿದ್ದಾರೆ.