ಸ್ವದೇಶಿ ಮೇಳ ಆಯೋಜಿಸಿ : ಸಂಸದರಿಗೆ ಮೋದಿ ಕರೆ

| N/A | Published : Sep 09 2025, 01:00 AM IST / Updated: Sep 09 2025, 05:27 AM IST

PM Narendra Modi

ಸಾರಾಂಶ

ಅಮೆರಿಕದ ತೆರಿಗೆ ಭಾರತದ ರಫ್ತಿನ ಕುತ್ತಿಗೆ ಹಿಸುಕುತ್ತಿರುವ ಹಾಗೂ ದೇಶದ ಆರ್ಥಿಕ ಸುಧಾರಣೆಗೆ ಜಿಎಸ್‌ಟಿಯಲ್ಲಿ ಬದಲಾವಣೆ ತರಲಾಗಿರುವ ಹೊತ್ತಿನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಉತ್ಪನ್ನಗಳ ಪ್ರಚಾರಕ್ಕೆ ಸ್ವದೇಶಿ ಮೇಳ ಆಯೋಜಿಸುವಂತೆ ಎನ್‌ಡಿಎ ಕೂಟದ ಸಂಸದರಿಗೆ ಸೂಚಿಸಿದ್ದಾರೆ.

ನವದೆಹಲಿ: ಅಮೆರಿಕದ ತೆರಿಗೆ ಭಾರತದ ರಫ್ತಿನ ಕುತ್ತಿಗೆ ಹಿಸುಕುತ್ತಿರುವ ಹಾಗೂ ದೇಶದ ಆರ್ಥಿಕ ಸುಧಾರಣೆಗೆ ಜಿಎಸ್‌ಟಿಯಲ್ಲಿ ಬದಲಾವಣೆ ತರಲಾಗಿರುವ ಹೊತ್ತಿನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಉತ್ಪನ್ನಗಳ ಪ್ರಚಾರಕ್ಕೆ ಸ್ವದೇಶಿ ಮೇಳ ಆಯೋಜಿಸುವಂತೆ ಎನ್‌ಡಿಎ ಕೂಟದ ಸಂಸದರಿಗೆ ಸೂಚಿಸಿದ್ದಾರೆ.  

ಉಪರಾಷ್ಟ್ರಪತಿ ಚುನಾವಣೆಯ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಮೋದಿ, ‘ಜಿಎಸ್‌ಟಿ ಕಡಿತದಿಂದ ನಮ್ಮ ಸರ್ಕಾರ ಅಲೆಯೊಂದನ್ನು ಸೃಷ್ಟಿಸಿದೆ. ಸಂಸದರು ಸಹ ವಿವಿಧ ಸಭೆಗಳನ್ನು ನಡೆಸುವ ಮೂಲಕ ಜನರಲ್ಲಿ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಅರಿವು ಮೂಡಿಸಬೇಕು. ಇದಕ್ಕಾಗಿ ನಿಮ್ಮನಿಮ್ಮ ಕ್ಷೇತ್ರಗಳಲ್ಲಿ ಮೇಳಗಳನ್ನು ಆಯೋಜಿಸಿ’ ಎಂದರು.

Read more Articles on