ಸಾರಾಂಶ
ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರನ್ನು ರಾಜಕಾರಣಕ್ಕೆ ಕರೆದುಕೊಂಡು ಬನ್ನಿ. ಅವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಲಿ. ಆಗ ನೋಡಿ, ಈ ದೇಶದಲ್ಲಿ ಜಾತಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಕಣ್ಮರೆಯಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ನವದೆಹಲಿ : ‘ರಾಜಕೀಯ ಹಿನ್ನೆಲೆಯಿಲ್ಲದ ಒಂದು ಲಕ್ಷ ಯುವಕರನ್ನು ರಾಜಕಾರಣಕ್ಕೆ ಕರೆದುಕೊಂಡು ಬನ್ನಿ. ಅವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಲಿ. ಆಗ ನೋಡಿ, ಈ ದೇಶದಲ್ಲಿ ಜಾತಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಕಣ್ಮರೆಯಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಕುಟುಂಬ ರಾಜಕೀಯದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
78ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ಕುರಿತು ದೇಶಕ್ಕೆ ವಿನೂತನ ಕರೆ ನೀಡಿದ ಅವರು, ‘ನಮ್ಮ ದೇಶದ ರಾಜಕೀಯ ಕ್ಷೇತ್ರಕ್ಕೆ ಒಂದು ಲಕ್ಷ ಹೊಸ ಜನಪ್ರತಿನಿಧಿಗಳು ಬರಬೇಕು. ಅವರು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಯುವಕರಾಗಿರಬೇಕು.
ಅವರ ಅಪ್ಪ-ಅಮ್ಮ, ಅಣ್ಣ-ತಮ್ಮ, ಮಾವ-ಅತ್ತೆ ಅಥವಾ ಸಂಬಂಧಿಕರು ಯಾವತ್ತೂ ರಾಜಕಾರಣದಲ್ಲಿ ಇದ್ದಿರಬಾರದು. ಅಂತಹ ಪ್ರತಿಭಾವಂತ, ಹೊಸ ರಕ್ತ ರಾಜಕಾರಣಕ್ಕೆ ಬರಬೇಕು. ಅವರು ಪಂಚಾಯ್ತಿ, ನಗರಪಾಲಿಕೆ, ಜಿಲ್ಲಾ ಪರಿಷತ್, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲಿಗೆ ಬೇಕಾದರೂ ಆಯ್ಕೆಯಾಗಲಿ. ಆಗ ದೇಶದಿಂದ ಜಾತಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ತನ್ನಿಂತಾನೇ ಮರೆಯಾಗುತ್ತದೆ. ತನ್ಮೂಲಕ ರಾಜಕೀಯಕ್ಕೆ ಹೊಸ ಐಡಿಯಾಗಳು ಬರುತ್ತವೆ’ ಎಂದು ಹೇಳಿದರು.