ದೀಪಾವಳಿ ಹಬ್ಬದ ದಿನ ದೇಶದ ಗಡಿಗೆ ತೆರಳಿ ಯೋಧರ ಜತೆಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ

| Published : Nov 01 2024, 12:03 AM IST / Updated: Nov 01 2024, 06:31 AM IST

ದೀಪಾವಳಿ ಹಬ್ಬದ ದಿನ ದೇಶದ ಗಡಿಗೆ ತೆರಳಿ ಯೋಧರ ಜತೆಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

ದೀಪಾವಳಿ ಹಬ್ಬದ ದಿನ ದೇಶದ ಗಡಿಗೆ ತೆರಳಿ ಯೋಧರ ಜತೆಗೆ ಹಬ್ಬ ಆಚರಣೆ ಮಾಡುವುದನ್ನು ಪ್ರಧಾನಿಯಾದಾಗಿನಿಂದಲೂ ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಈ ವರ್ಷವೂ ಮುಂದುವರಿಸಿದರು.

  ಭುಜ್‌ (ಗುಜರಾತ್‌) : ದೀಪಾವಳಿ ಹಬ್ಬದ ದಿನ ದೇಶದ ಗಡಿಗೆ ತೆರಳಿ ಯೋಧರ ಜತೆಗೆ ಹಬ್ಬ ಆಚರಣೆ ಮಾಡುವುದನ್ನು ಪ್ರಧಾನಿಯಾದಾಗಿನಿಂದಲೂ ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಈ ವರ್ಷವೂ ಮುಂದುವರಿಸಿದರು. ಗುಜರಾತಿನ ಕಛ್‌ನಲ್ಲಿರುವ ಸರ್‌ಕ್ರೀಕ್‌ನಲ್ಲಿ ಭಾರತ- ಪಾಕಿಸ್ತಾನ ಗಡಿಯಲ್ಲಿ ಪಹರೆ ಕಾಯುತ್ತಿರುವ ಸೈನಿಕರಿಗೆ ಗುರುವಾರ ಸಿಹಿ ತಿನ್ನಿಸಿ ಮೋದಿ ಅವರು ಹಬ್ಬ ಮಾಡಿದರು.

ಗಡಿ ಭದ್ರತಾ ಪಡೆ (ಬಿಎಸ್‌ಎಫ್‌), ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ ಯೋಧರಿಗೆ ಮೋದಿ ಅವರು ಸಿಹಿ ಹಂಚಿದರು. ಈ ವೇಳೆ ಅವರು ಬಿಎಸ್‌ಎಫ್‌ ಸೈನಿಕರ ರೀತಿ ಸಮವಸ್ತ್ರ ಧರಿಸಿದ್ದರು.

ಬಳಿಕ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ಸೈನಿಕರ ಕಟ್ಟುನಿಟ್ಟಾದ ಪಹರೆಯಿಂದಾಗಿ ಈ ಭಾಗದತ್ತ ಕಣ್ಣು ಹಾಕುವ ಧೈರ್ಯ ಯಾರಿಗೂ ಇಲ್ಲ. ದೇಶದ ಒಂದಿಂಚೂ ಜಾಗದ ವಿಚಾರದಲ್ಲೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

ಯೋಧರ ಜತೆಗೆ ದೀಪಾವಳಿ ಆಚರಣೆ ಮಾಡಿದಾಗಲೆಲ್ಲಾ ನನ್ನ ಸಂತೋಷ ಹಲವಾರು ಪಟ್ಟು ಹೆಚ್ಚಳವಾಗುತ್ತದೆ. 500 ವರ್ಷಗಳ ಬಳಿಕ ಶ್ರೀರಾಮ ಅಯೋಧ್ಯೆಗೆ ಮರಳಿರುವುದರಿಂದ ಈ ಬಾರಿಯ ದೀಪಾವಳಿ ವಿಶೇಷವಾದುದ್ದಾಗಿದೆ ಎಂದರು.

ವಿಶ್ವದ ಅತ್ಯಾಧುನಿಕ ಸೇನಾಪಡೆಗಳ ಸಾಲಿಗೆ ಭಾರತವನ್ನು ಸೇರ್ಪಡೆ ಮಾಡುವ ಉದ್ದೇಶದಿಂದ ಆಧುನಿಕ ಯುದ್ಧ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ಎಲ್ಲ ಯತ್ನಗಳನ್ನೂ ಮಾಡುತ್ತಿದೆ ಎಂದು ಹೇಳಿದರು.