ಇಸ್ರೋದ 3 ಯೋಜನೆಗೆ ಮೋದಿ ಚಾಲನೆ

| Published : Feb 28 2024, 02:32 AM IST / Updated: Feb 28 2024, 11:21 AM IST

ಸಾರಾಂಶ

ವಿವಿಧ ಬಾಹ್ಯಾಕಾಶ ಯೋಜನೆಗಳಿಗೆ ನೆರವಾಗುವ ಇಸ್ರೋದ 3 ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಲ್ಲಿ ಚಾಲನೆ ನೀಡಿದರು.

ತಿರುವನಂತರಪುರ: ವಿವಿಧ ಬಾಹ್ಯಾಕಾಶ ಯೋಜನೆಗಳಿಗೆ ನೆರವಾಗುವ ಇಸ್ರೋದ 3 ಬಾಹ್ಯಾಕಾಶ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಲ್ಲಿ ಚಾಲನೆ ನೀಡಿದರು.

ಇಲ್ಲಿನ ಇಸ್ರೋದ ವಿಕ್ರಂ ಸಾರಾಭಾಯಿ ಸ್ಪೇಸ್‌ ಸೆಂಟರ್‌ಗೆ (ವಿಎಸ್‌ಎಸ್‌ಸಿ) ಭೇಟಿ ನೀಡಿದ್ದ ಪ್ರಧಾನಿ ಮೋದಿ ಈ ವೇಳೆ, ವಿಎಸ್‌ಎಸ್‌ಸಿಯಲ್ಲಿನ ‘ಟ್ರೈಸೋನಿಕ್‌ ವಿಂಡ್‌ ಟನಲ್‌’, ತಮಿಳುನಾಡಿನ ಮಹೇಂದ್ರಗಿರಿಯ ಇಸ್ರೋ ಪ್ರೊಪಲ್ಷನ್‌ ಕಾಂಪ್ಲೆಕ್ಸ್‌ನಲ್ಲಿ ನಿರ್ಮಿತ ‘ಸೆಮಿ ಕ್ರಯೋಜೆನಿಕ್‌ ಇಂಟಿಗ್ರೇಟೆಡ್‌ ಎಂಜಿನ್‌ ಮತ್ತು ಸ್ಟೇಜ್‌ ಸೆಟ್‌ ಫೆಸಿಲಿಟಿ’ ಮತ್ತು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಸ್ಪೇಸ್ ಸೆಂಟರ್‌ನಲ್ಲಿ ಪಿಎಸ್‌ಎಲ್‌ಜಿ ಜೋಡಣಾ ಘಟಕವನ್ನು ಉದ್ಘಾಟಿಸಿದರು.

1800 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಮೂರೂ ಘಟಕಗಳು ಬಾಹ್ಯಾಕಾಶ ವಲಯ ಸಂಬಂಧ ಜಾಗತಿಕ ಗುಣಮಟ್ಟದ ತಾಂತ್ರಿಕತೆಯನ್ನು ಒದಗಿಸಲಿದೆ.ಇದೇ ವೇಳೆ ಇಸ್ರೋದ ಮಾನವ ಸಹಿತ ಗಗನಯಾನ ಯೋಜನೆಯ ಬೆಳವಣಿಗೆಗಳನ್ನೂ ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದರು.