ನಾಳೆ ಇಸ್ರೋದ 2ನೇ ಉಡ್ಡಯನ ಕೇಂದ್ರಕ್ಕೆ ಮೋದಿ ಚಾಲನೆ

| Published : Feb 27 2024, 01:34 AM IST / Updated: Feb 27 2024, 12:45 PM IST

ಸಾರಾಂಶ

ಭಾರತದ ಎರಡನೇ ಉಪಗ್ರಹ ಉಡಾವಣಾ ಕೇಂದ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತಮಿಳುನಾಡಿನ ತೂತ್ತುಕುಡಿ ಬಳಿಯ ಕುಲಶೇಖರಪಟ್ಟಿಣಂನಲ್ಲಿ ಉದ್ಘಾಟಿಸಲಿದ್ದಾರೆ.

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಇಸ್ರೋದ 2ನೇ ಉಪಗ್ರಹ ಉಡ್ಡಯನ ಕೇಂದ್ರ ಉದ್ಘಾಟಿಸಲಿದ್ದಾರೆ.

ಈ ಕೇಂದ್ರವು ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂ ಎಂಬಲ್ಲಿ ತಲೆಯೆತ್ತಿದ್ದು, ಲಘು ಉಪಗ್ರಹ ಉಡ್ಡಯನಕ್ಕೆಂದು ಇದನ್ನು ಬಳಸಲಾಗುತ್ತದೆ.

ಈವರೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಉಪಗ್ರಹ ಉಡ್ಡಯನ ಕೇಂದ್ರ ಮಾತ್ರ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು.

ಇದೇ ವೇಳೆ, ಮಂಗಳವಾರ ಕೇರಳದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಲಿದ್ದು, ವಿವಿಧ ತಾಂತ್ರಿಕ ಘಟಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಹಾಗೂ ಮಾನವಸಹಿತ ಗಗನಯಾನ ಯೋಜನೆಯ ಪ್ರಗತಿಯ ಮಾಹಿತಿ ಪಡೆಯಲಿದ್ದಾರೆ.