ಸಾರಾಂಶ
ಲೋಕಸಭೆ ಚುನಾವಣೆ ಅಧಿಸೂಚನೆ ಪ್ರಕಟವಾಗುವ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ರಾಜಸ್ಥಾನದ ಪೋಖ್ರಣ್‌ನಲ್ಲಿ ಮಾ.12ರಂದು ‘ಭಾರತ್ ಶಕ್ತಿ’ ವಾರ್ ಗೇಮ್ ಹೆಸರಿನಲ್ಲಿ ಸೇನಾ ಶಕ್ತಿಯ ಅನಾವರಣ ಮಾಡಲಾಗುತ್ತದೆ.
ನವದೆಹಲಿ: ಲೋಕಸಭೆ ಚುನಾವಣೆ ಅಧಿಸೂಚನೆ ಪ್ರಕಟವಾಗುವ ಕ್ಷಣಗಣನೆ ಆರಂಭವಾಗಿರುವ ನಡುವೆಯೇ ರಾಜಸ್ಥಾನದ ಪೋಖ್ರಣ್‌ನಲ್ಲಿ ಮಾ.12ರಂದು ‘ಭಾರತ್ ಶಕ್ತಿ’ ವಾರ್ ಗೇಮ್ ಹೆಸರಿನಲ್ಲಿ ಸೇನಾ ಶಕ್ತಿಯ ಅನಾವರಣ ಮಾಡಲಾಗುತ್ತದೆ.
ಈ ವಾರ್‌ಗೇಮ್‌ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರ ವೇದಿಕೆಗಳು ಮತ್ತು ವ್ಯವಸ್ಥೆಗಳ ಪ್ರದರ್ಶನ ಮತ್ತು ಹಾರಾಟ ನಡೆಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ಇದು ಮೋದಿಯವರ ‘ಆತ್ಮನಿರ್ಭರ್ ಭಾರತ’ ಪರಿಕಲ್ಪನೆಯನ್ನು ಆಧರಿಸಿದೆ ಮತ್ತು ಭಾರತದ ಸೇನಾ ಶಕ್ತಿಯನ್ನು ಪ್ರದರ್ಶಿಸುತ್ತದೆ. ಮೂರೂ ಸೇನಾಪಡೆಗಳ ಮುಖ್ಯಸ್ಥ ಜ। ಅನಿಲ್ ಚೌಹಾಣ್ ಸೇರಿದಂತೆ ತ್ರಿ-ಸೇವೆಗಳ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪ್ರದರ್ಶನಕ್ಕೆ ಇಡಲಾಗುವ ಶಸ್ತ್ರಾಸ್ತ್ರಗಳಲ್ಲಿ ತೇಜಸ್ ಯುದ್ಧ ವಿಮಾನ, ಕೆ-9 ಫಿರಂಗಿ ಬಂದೂಕುಗಳು, ಸ್ವದೇಶಿ ಡ್ರೋನ್‌ಗಳು, ಪಿನಾಕಾ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್‌ಗಳು ಮತ್ತು ಅಲ್ಪ-ಶ್ರೇಣಿಯ ಕ್ಷಿಪಣಿಗಳು ಸೇರಿವೆ.
ಕೆಲವು ಸಮರನೌಕೆಗಳನ್ನು 50 ನಿಮಿಷಗಳ ಪ್ರಾತ್ಯಕ್ಷಿಕೆಯಲ್ಲಿ ಹಾರಾಟ ಕೂಡ ಮಾಡಲಾಗುತ್ತದೆ ಎಂದಯ ಸೇನಾ ವಿನ್ಯಾಸ ಬ್ಯೂರೋ ಎಡಿಜಿ ಸಿ.ಎಸ್. ಮಾನ್ ಶನಿವಾರ ಹೇಳಿದ್ದಾರೆ.
ಫೆಬ್ರವರಿಯಲ್ಲಿ, ಪ್ರಧಾನಿ ಮೋದಿ ಪೋಖ್ರಣ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಭಾರತೀಯ ವಾಯುಪಡೆಯ ಅತಿದೊಡ್ಡ ಯುದ್ಧ ಸಮಾರಾಭ್ಯಾಸವಾದ ವಾಯುಶಕ್ತಿ-2024 ನಲ್ಲಿ ಭಾಗವಹಿಸಿದ್ದರು.
ರಫೇಲ್ ವಿಮಾನ ಸೇರಿದಂತೆ 140ಕ್ಕೂ ಹೆಚ್ಚು ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದವು.