ಸಾರಾಂಶ
ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಪಕ್ಕದಲ್ಲೇ ವೇದಿಕೆ ಮೇಲೆ ಆಸೀನರಾಗಿದ್ದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೊದಿ ತೋರಿದ ಔದಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ನವದೆಹಲಿ: ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಪಕ್ಕದಲ್ಲೇ ವೇದಿಕೆ ಮೇಲೆ ಆಸೀನರಾಗಿದ್ದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೊದಿ ತೋರಿದ ಔದಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಪವಾರ್ ಅವರಿಗೆ ಬಾಯಾರಿಕೆ ಆಗಿದ್ದಾಗ ಅವರ ಗ್ಲಾಸ್ ಖಾಲಿ ಇತ್ತು. ಖುದ್ದು ಮೋದಿ ಅವರು ಬಾಟಲ್ ತೆರೆದು ಅವರ ಗ್ಲಾಸಿಗೆ ನೀರು ಹಾಕಿ, ನೀರು ಕುಡಿಯಲು ನೆರವಾದರು. ಅಲ್ಲದೆ, ಅವರಿಗೆ ಆಸನದ ಮೇಲೆ ಕೂರಲೂ ಸಹಾಯ ಮಾಡಿದರು.ಬಳಿಕ ತಮ್ಮ ಭಾಷಣದಲ್ಲಿ, ‘ಇಂದು ಶರದ್ ಪವಾರ್ ಅವರ ಆಮಂತ್ರಣದ ಮೇರಗೆ ನಾನಿಲ್ಲಿ ಬಂದಿದ್ದೇನೆ’ ಎಂದರು.