ಇಂದಿನಿಂದ ನಾಲ್ಕು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಥಾಯ್ಲೆಂಡ್‌, ಶ್ರೀಲಂಕಾ ಪ್ರವಾಸ

| N/A | Published : Apr 03 2025, 12:30 AM IST / Updated: Apr 03 2025, 07:21 AM IST

Prime Minister Narendra Modi (File photo/ANI)

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ, ಗುರುವಾರದಿಂದ ನಾಲ್ಕು ದಿನಗಳ ಕಾಲ ಥಾಯ್ಲೆಂಡ್‌, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಏ.3, 4 ರಂದು ಥಾಯ್ಲೆಂಡ್‌ಗೆ ಭೇಟಿ ನೀಡಲಿರುವ ಪ್ರಧಾನಿ ಬಿಮ್‌ಸ್ಟೆಕ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ಬ್ಯಾಂಕಾಕ್: ಪ್ರಧಾನಿ ನರೇಂದ್ರ ಮೋದಿ, ಗುರುವಾರದಿಂದ ನಾಲ್ಕು ದಿನಗಳ ಕಾಲ ಥಾಯ್ಲೆಂಡ್‌, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಏ.3, 4 ರಂದು ಥಾಯ್ಲೆಂಡ್‌ಗೆ ಭೇಟಿ ನೀಡಲಿರುವ ಪ್ರಧಾನಿ ಬಿಮ್‌ಸ್ಟೆಕ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. 

ಇದು ಪ್ರಧಾನಿ ನರೇಂದ್ರ ಮೋದಿಯವರ ಥಾಯ್ಲೆಂಡ್‌ಗೆ ನೀಡುತ್ತಿರುವ ಮೂರನೇ ಭೇಟಿಯಾಗಿದ್ದು, ಈ ವೇಳೆ ಪ್ರಧಾನಿ ಪೆಟೋಂಗ್ಟರ್ನ್ ಶಿನಾವಾತ್ರಾ ಅವರನ್ನು ಭೇಟಿಯಾಗಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ. 

ಜೊತೆಗೆ 6ನೇಯ ಬಿಮ್‌ಸ್ಟೆಕ್ ಸಮ್ಮೇಳನದಲ್ಲಿಯೂ ಭಾಗಿಯಾಗಲಿದ್ದು, ಸದಸ್ಯ ರಾಷ್ಟ್ರಗಳೊಡನೆ ಕಡಲ ಸಹಕಾರ ಒಪ್ಪಂದಕ್ಕೆ ಸಹಿಹಾಕುವ ಸಾಧ್ಯತೆಯಿದೆ. ಸಮ್ಮೇಳನದಲ್ಲಿ ಮೋದಿ ನೇಪಾಳ ಪ್ರಧಾನಿ ಕೆ.ಪಿ ಓಲಿ ಶರ್ಮಾ, ಬಾಂಗ್ಲಾದ ಮದ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಯೂನಸ್‌ ಅವರನ್ನೂ ಭೇಟಿ ಮಾಡಲಿದ್ದಾರೆ. ಆ ಬಳಿಕ ಏ.5 ಹಾಗೂ 6ರಂದು ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ.