ಸಾರಾಂಶ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸತತ 3ನೇ ಅವಧಿಗೆ ಪ್ರಧಾನಿ ಆದ ನಂತರ ಮೊದಲ ಸಲ ಸ್ವಕ್ಷೇತ್ರ ವಾರಾಣಸಿಗೆ ಮಂಗಳವಾರ ಭೇಟಿ ಕೊಡಲಿದ್ದಾರೆ.
ಭೇಟಿ ವೇಳೆ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಭಾಗಿಯಾಗಲಿರುವ ಅವರು 9.26 ಕೋಟಿ ರೈತರಿಗೆ ವಾರ್ಷಿಕ ತಲಾ 6000 ರು. ನೀಡುವ ಕಿಸಾನ್ ಸಮ್ಮಾನ್ ನಿಧಿಯ 20,000 ಕೋಟಿ ರು. ಕಂತು ಬಿಡುಗಡೆ ಮಾಡಲಿದ್ದಾರೆ. 11 ಕೋಟಿ ರೈತ ಕುಟುಂಬಗಳು ಇದರ ಲಾಭ ಪಡೆಯಲಿವೆ.ಬಳಿಕ ದಶಾಶ್ವಮೇಧ ಘಾಟ್‌ನಲ್ಲಿ ಸಂಜೆ 7ಕ್ಕೆ ಗಂಗಾ ಆರತಿಯಲ್ಲಿ ಆಭಗವಹಿಸಲಿರುವ ಪ್ರಧಾನಿ, ನಂತರ ರಾತ್ರಿ 8 ಗಂಟೆಗೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದರ್ಶನ ಪಡೆಯಲಿದ್ದಾರೆ.
ತಮ್ಮ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಮೋದಿ ಕಾಶಿಗೆ ಭೇಟಿ ನೀಡಲಿದ್ದಾರೆ ಎಂದು ವಾರಾಣಸಿ ಜಿಲ್ಲೆಯ ಬಿಜೆಪಿ ಮಾಧ್ಯಮ ಉಸ್ತುವಾರಿ ಅರವಿಂದ್ ಮಿಶ್ರಾ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ತಮ್ಮ ಕ್ಷೇತ್ರವಾದ ವಾರಾಣಸಿಯಿಂದ ಸತತ ಮೂರನೆ ಬಾರಿಗೆ ಗೆಲುವು ಸಾಧಿಸಿದ್ದರು.