ಫೆಬ್ರವರಿಯಲ್ಲಿ ಅಮೆರಿಕಕ್ಕೆ ಮೋದಿ ಭೇಟಿ?

| Published : Jan 29 2025, 01:32 AM IST

ಸಾರಾಂಶ

ವಾಷಿಂಗ್ಟನ್‌: ಭಾರತರದ ಮೇಲೆ ತೆರಿಗೆ ಹಾಕುವ ಎಚ್ಚರಿಕೆ, ಅಕ್ರಮ ವಲಸಿಗರ ಗದ್ದಲಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ವಾಷಿಂಗ್ಟನ್‌: ಭಾರತರದ ಮೇಲೆ ತೆರಿಗೆ ಹಾಕುವ ಎಚ್ಚರಿಕೆ, ಅಕ್ರಮ ವಲಸಿಗರ ಗದ್ದಲಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಈ ವಿಚಾರದ ಬಗ್ಗೆ ಸ್ವತಃ ಡೊನಾಲ್ಡ್‌ ಟ್ರಂಪ್‌ ಅವರೇ ಸುಳಿವು ನೀಡಿದ್ದು, ನರೇಂದ್ರ ಮೋದಿ ಫೆಬ್ರವರಿಯಲ್ಲಿ ಈ ಭೇಟಿ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಜತೆಗೆ, ಅಮೆರಿಕದಲ್ಲಿರುವ ಭಾರತದ ಅಕ್ರಮ ವಲಸಿಗರ ವಿಚಾರದಲ್ಲಿ ಮೋದಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದೂ ಟ್ರಂಪ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫ್ಲೋರಿಡಾದಲ್ಲಿ ಪತ್ರಕರ್ತರ ಜತೆಗೆ ಮಾತನಾಡಿದ ಟ್ರಂಪ್‌, ಅಕ್ರಮ ವಲಸಿಗರ ವಿಚಾರದಲ್ಲಿ ಭಾರತದ ಜತೆಗೆ ಮಾತುಕತೆ ನಡೆಯುತ್ತಿದೆ. ಸೋಮವಾರ ಮೋದಿ ಅವರ ಜತೆಗೆ ದೂರವಾಣಿ ಮೂಲಕ ಸುದೀರ್ಘ ಮಾತುಕತೆ ನಡೆಯಿತು. ಫೆಬ್ರವರಿ ವೇಳೆಗೆ ಅವರು ವೈಟ್‌ ಹೌಸ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ. ನಾವು ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಮಾತುಕತೆ ವೇಳೆ ಎಲ್ಲಾ ವಿಚಾರಗಳೂ ಚರ್ಚೆಗೆ ಬಂತು ಎಂದು ತಿಳಿಸಿದರು.