ನವದೆಹಲಿ: 1 ವರ್ಷದವರೆಗೆ ಅನಗತ್ಯ ಚಿನ್ನ ಖರೀದಿ ಮುಂದೂಡಿ ಎಂಬ ಪ್ರಧಾನಿ ನರೇಂದ್ರ ಮೋದಿ ಸಲಹೆಯನ್ನು ಜನತೆ ಪಾಲಿಸಿದರೆ ವಿವಿಧ ರೀತಿಯಲ್ಲಿ ಆಭರಣೋದ್ಯಮ ನಂಬಿಕೊಂಡಿರುವ ಸುಮಾರು 1 ಕೋಟಿ ಮಂದಿಯ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ಆಭರಣ ಮಂಡಳಿ ಹೇಳಿಕೊಂಡಿದೆ.

ದೇಶಭಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವಿಷಯ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿಯ ಅಧ್ಯಕ್ಷ ರಾಜೇಶ್ ರೋಕ್ಡೆ ‘ಪ್ರಧಾನಿಯವರು ಹೇಳಿರುವುದೆಲ್ಲ ದೇಶಭಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವಿಷಯ.

ಅನಗತ್ಯ ಚಿನ್ನ ಖರೀದಿಸುವವರು ನಿಲ್ಲಿಸಬೇಕು

 ಅನಗತ್ಯ ಚಿನ್ನ ಖರೀದಿಸುವವರು ಅದನ್ನು ನಿಲ್ಲಿಸಬೇಕು ಎಂದು ಪ್ರಧಾನಿ ಹೇಳುತ್ತಿರಬಹುದು. ನಾನು ಆ ವಿಷಯ ಖಂಡಿತವಾಗಿ ಒಪ್ಪುತ್ತೇನೆ. ಆದರೆ ಒಂದು ಕೋಟಿಗೂ ಹೆಚ್ಚು ಜನರು ಆಭರಣ ಉದ್ಯಮ ಅವಲಂಬಿಸಿ ಹಲವಾರು ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಆಭರಣಗಳ ಮೇಲೆ ಹೇರುವ ಯಾವುದೇ ರೀತಿಯ ನಿರ್ಬಂಧ ಅವರಿಗೆ ದೊಡ್ಡ ನಿರುದ್ಯೋಗದ ಪ್ರಶ್ನೆಯನ್ನು ಹುಟ್ಟುಹಾಕಬಹುದು’ ಎಂದಿದ್ದಾರೆ.