ಇರಾನ್-ಅಮೆರಿಕ ಯುದ್ಧದ ಆತಂಕ ಕಡಿಮೆ ಆಗಿರುವ ಕಾರಣ ಜು.1ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿನ ತಾತ್ಕಾಲಿಕ ನಿರ್ಬಂಧಗಳನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ಮಾಡಿದೆ.
ನವದೆಹಲಿ: ಇರಾನ್-ಅಮೆರಿಕ ಯುದ್ಧದ ಆತಂಕ ಕಡಿಮೆ ಆಗಿರುವ ಕಾರಣ ಜು.1ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿನ ತಾತ್ಕಾಲಿಕ ನಿರ್ಬಂಧಗಳನ್ನು ತೆಗೆದುಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ಮಾಡಿದೆ.
ಮಧ್ಯಪ್ರಾಚ್ಯ ಯುದ್ಧದ ಕಾರಣ ಭಾರತಕ್ಕೆ ತೈಲ ಪೂರೈಕೆ ಕುಂಠಿತವಾಗಿತ್ತು
ಮಧ್ಯಪ್ರಾಚ್ಯ ಯುದ್ಧದ ಕಾರಣ ಭಾರತಕ್ಕೆ ತೈಲ ಪೂರೈಕೆ ಕುಂಠಿತವಾಗಿತ್ತು. ಹೀಗಾಗಿ ಪೆಟ್ರೋಲ್-ಡೀಸೆಲ್ ಖರೀದಿ ಮೇಲೆ ಸರ್ಕಾರ ಹಲವು ನಿರ್ಬಂಧ ವಿಧಿಸಿತ್ತು. ಈ ಪ್ರಕಾರ ರೀಟೇಲ್ ಬಂಕ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದನ್ನು ಕೆಎಸ್ಸಾರ್ಟಿಸಿ, ಕಾರ್ಖಾನೆಗಳಂಥ ವಾಣಿಜ್ಯ ಖರೀದಿದಾರರಿಗೆ ಕಡಿವಾಣ ಹಾಕಲಾಗಿತ್ತು. ಅಲ್ಲದೆ, ಕ್ಯಾನ್‌ಗಳಲ್ಲಿ, ಬಾಟಲ್‌ಗಳಲ್ಲಿ ತೈಲ ತುಂಬಿಸಿಕೊಂಡು ಒಯ್ಯುವುದನ್ನು ನಿರ್ಬಂಧಿಸಲಾಗಿತ್ತು.
ಅಧಿಕೃತ ಆದೇಶ
ಇದೀಗ ಸೋಮವಾರ ಅಧಿಕೃತ ಆದೇಶ ಹೊರಡಿಸಲಾಗಿದ್ದು, ಈ ನಿರ್ಬಂಧಗಳು ಜು.1ರಿಂದ ಕೊನೆಗೊಳ್ಳುತ್ತವೆ ಎಂದು ಸರ್ಕಾರ ತಿಳಿಸಿದೆ. ಇದರರ್ಥ ವಾಣಿಜ್ಯ ಬಳಕೆದಾರರು ಮತ್ತೊಮ್ಮೆ ಮಿತಿಗಳಿಲ್ಲದೆ ಚಿಲ್ಲರೆ ಮಾರಾಟ ಮಳಿಗೆಗಳಿಂದ ಇಂಧನವನ್ನು ಖರೀದಿಸಲು ಸಾಧ್ಯವಾಗುತ್ತದೆ.
