ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದಿನ ಟ್ವೀಟರ್) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೊಸ ದಾಖಲೆ ಬರೆದಿದ್ದಾರೆ. ಎಕ್ಸ್‌ ಖಾತೆಯಲ್ಲಿ 10 ಕೋಟಿ ಫಾಲೋವರ್ಸ್‌ ಹೊಂದಿರುವ ಮೊದಲ ಜಾಗತಿಕ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ನವದೆಹಲಿ: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಹಿಂದಿನ ಟ್ವೀಟರ್) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೊಸ ದಾಖಲೆ ಬರೆದಿದ್ದಾರೆ. ಎಕ್ಸ್‌ ಖಾತೆಯಲ್ಲಿ 10 ಕೋಟಿ ಫಾಲೋವರ್ಸ್‌ ಹೊಂದಿರುವ ಮೊದಲ ಜಾಗತಿಕ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಜಾಗತಿಕ ನಾಯಕರಾದ ಅಮೆರಿಕ ಅಧ್ಯಕ್ಷ ಜೋ ಬೈಡನ್ 3.81 ಕೋಟಿ , ಪೋಪ್ ಫ್ರಾನ್ಸಿಸ್‌ 1.85 ಕೋಟಿ, ದುಬೈ ಆಡಳಿತಗಾರ ಶೇಖ್‌ ಮೊಹಮ್ಮದ್‌ 1.12 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ 2.64 ಕೋಟಿ ,ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2.75 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ರಾಟ್ ಕೊಹ್ಲಿ, ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್‌, ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್, ಹಾಲಿವುಡ್‌ನ ಟೇಲರ್ ಸ್ವಿಫ್ಟ್, ಲೇಡಿ ಗಾಗಾ ಮತ್ತು ಕಿಮ್ ಕರ್ದಶಿಯನ್‌ರತಹ ಸೆಲೆಬ್ರಿಟಿಗಳಿಗಿಂತಲೂ ಮುಂದಿದ್ದಾರೆ ಮೋದಿ ಮುಂದಿದ್ದಾರೆ.ಮೋದಿ ಹರ್ಷ:ಈ ಬಗ್ಗೆ ಟ್ವೀಟ್‌ ಮಾಡಿರುವ ಮೋದಿ, ‘100 ಮಿಲಿಯನ್! ಈ ರೋಮಾಂಚಕ ಮಾಧ್ಯಮದಲ್ಲಿರುವುದಕ್ಕೆ ಸಂತೋಷವಾಗಿದೆ. ಈ ಮಾಧ್ಯಮದಲ್ಲಿ ಚರ್ಚೆ, ಚರ್ಚೆ, ಒಳನೋಟಗಳು, ಜನರ ಆಶೀರ್ವಾದ, ರಚನಾತ್ಮಕ ಟೀಕೆಗಳು ಇರುತ್ತವೆ. ಭವಿಷ್ಯದಲ್ಲಿ ಕೂಡ ಈ ಮಾಧ್ಯಮದಲ್ಲಿ ಇದನ್ನೇ ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.