ಭಾರತದ 5 ವಿಮಾನ, 2 ಡ್ರೋನ್‌ ನಮ್ಮಿಂದ ಧ್ವಂಸ : ಷರೀಫ್‌

| N/A | Published : May 08 2025, 12:38 AM IST / Updated: May 08 2025, 04:21 AM IST

ಸಾರಾಂಶ

 ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌   ‘ಪಾಕ್‌ ಸೇನೆ ಭಾರತದ ದಾಳಿಗೆ ಸಿದ್ಧವಿತ್ತು. ಭಾರತದ 5 ವಿಮಾನ. 2 ಡ್ರೋನ್‌ ಅನ್ನು ಹೊಡೆದುರುಳಿಸಿದೆವು’ ಎಂದಿದ್ದಾರೆ 

  ಇಸ್ಲಾಮಾಬಾದ್‌ : ‘ಆಪರೇಷನ್‌ ಸಿಂದೂರ್‌’ ಹೆಸರಿನಲ್ಲಿ ಭಾರತ ತಡರಾತ್ರಿ ನಡೆಸಿದ ಕಾರ್ಯಾಚರಣೆ ಬೆನ್ನಲ್ಲೇ ಪಾಕಿಸ್ತಾನ ದಡಬಡಾಯಿಸಿ ಎದ್ದಿದ್ದರೆ, ಅಲ್ಲಿನ ಪ್ರಧಾನಿ ಶೆಹಬಾಜ್‌ ಷರೀಫ್‌ ಮಾತ್ರ, ‘ಪಾಕ್‌ ಸೇನೆ ಭಾರತದ ದಾಳಿಗೆ ಸಿದ್ಧವಿತ್ತು. ಭಾರತದ 5 ವಿಮಾನ. 2 ಡ್ರೋನ್‌ ಅನ್ನು ಹೊಡೆದುರುಳಿಸಿದೆವು’ ಎಂದಿದ್ದಾರೆ ಹಾಗೂ ನಮ್ಮ ಸೇನೆ ಯಶಸ್ವಿಯಾಗಿ ಭಾರತದ ವಿಮಾನಗಳನ್ನು ಹಿಮ್ಮೆಟ್ಟಿಸಿತು ಶ್ಲಾಘಿಸಿದ್ದಾರೆ.

ಬುಧವಾರ ರಾತ್ರಿ ಪಾಕ್‌ ಸಂಸತ್ತನ್ನುದ್ದೇಶಿಸಿ ಮಾತನಾಡಿದ ಷರೀಫ್‌, ‘ಭಾರತದ ಯೋಜನೆ ಬಗ್ಗೆ ನಮಗೆ ಗುಪ್ತಚರ ಮಾಹಿತಿ ದೊರಕಿತ್ತು. ಕಳೆದ ರಾತ್ರಿ 80 ಭಾರತೀಯ ವಿಮಾನಗಳು ದಾಳಿ ನಡೆಸಿದವು. ನಮ್ಮ ಸೇನೆ ಅದನ್ನು ತಡೆದಿಯಿತು. 

ನಾವು ರಫೇಲ್‌ಗಳನ್ನು ಜಾಮ್‌ ಮಾಡಿ, 5 ಶತ್ರು ವಿಮಾನಗಳು ಮತ್ತು 2 ಡ್ರೋನ್‌ಗಳನ್ನು ಹೊಡೆದುಹಾಕಿದೆವು’ ಎಂದರು. ಆದರೆ ಇದಕ್ಕೆ ಯಾವುದೇ ಪುರಾವೆ ನೀಡಲಿಲ್ಲ.ವಿಪರ್ಯಾಸವೆಂದರೆ, ಭಾಷಣಕ್ಕೂ ಮೊದಲು ನಡೆದ ರಾಷ್ಟ್ರೀಯ ಭದ್ರತಾ ಸಭೆ(ಎನ್‌ಎಸ್‌ಸಿ)ಯಲ್ಲಿ ಭಾರತದ ದಾಳಿಯನ್ನು ‘ಅಪ್ರಚೋದಿತ’ ಮತ್ತು ‘ಕಾನೂನುಬಾಹಿರ ಯುದ್ಧದ ನಡೆ’ ಎಂದು ಕರೆಯಲಾಗಿತ್ತು ಹಾಗೂ ಪಾಕ್‌ ಪಡೆಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಈ ಮೊದಲು ‘ಆಪರೇಷನ್‌ ಸಿಂದೂರ್‌’ ಬಗ್ಗೆ ಮಾತನಾಡಿದ್ದ ಬುಧವಾರ ಬೆಳಗ್ಗೆ ಷರೀಫ್‌, ‘ಇದು ಯುದ್ಧದ ನಡೆ. ಇದಕ್ಕೆ ತಕ್ಕ ಉತ್ತರ ನೀಡುವುದು ನಮ್ಮ ಹಕ್ಕು’ ಎಂದಿದ್ದರು.

ಭಾರತದ 5 ಯುದ್ಧ ವಿಮಾನ ನಾಶ ಮಾಡಿದ್ದೇನೆಂದು ಸುಳ್ಳು ಹೇಳಿದ ಪಾಕ್‌!

ನವದೆಹಲಿ: ಭಾರತ ನಡೆಸಿದ ಆಪರೇಷನ್ ಸಿಂದೂರ್‌ಗೆ ಪ್ರತೀಕಾರವಾಗಿ ಪಾಕಿಸ್ತಾನವು, ಭಾರತ ಹಾರಿಸಿದ 3 ರಫೇಲ್ ಜೆಟ್‌ಗಳ , ಒಂದು ಸುಖೋಯ್‌-30 ಮತ್ತು ಒಂದು ಮಿಗ್ -29 ಅನ್ನು ತಾನು ಹೊಡೆದುರುಳಿಸಿದ್ದೇನೆ ಎಂದು ನೀಡಿದ ಹೇಳಿಕೆ ಸುಳ್ಳೆಂದು ಸಾಬೀತಾಗಿದೆ.

 ಖುದ್ದು ಭಾರತ ಸರ್ಕಾರ ಇದನ್ನು ತಿರಸ್ಕರಿಇಸದೆ,ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಅವರು, ತಮ್ಮ ದೇಶದ ಸೇನೆಯು 5 ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಿದೆ ಮತ್ತು ಅಜ್ಞಾತ ಸಂಖ್ಯೆಯ ಭಾರತೀಯ ಸೈನಿಕರನ್ನು ಸೆರೆಹಿಡಿದಿದೆ. ಅವರು ಉಪಕ್ರಮವನ್ನು ತೆಗೆದುಕೊಂಡಿದ್ದಾರೆ, ನಾವು ಇದೀಗ ಪ್ರತಿಕ್ರಿಯಿಸಿದ್ದೇವೆ’ ಎಂದಿದ್ದರು.