ಸಾರಾಂಶ
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಡಿಎಂಕೆ ಸಚಿವ, ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್ ಜೋಕರ್ ಎಂದು ಹೀಯಾಳಿಸಿದ್ದಾರೆ.
ಕೊಯಮತ್ತೂರು: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಡಿಎಂಕೆ ಸಚಿವ, ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್ ಜೋಕರ್ ಎಂದು ಹೀಯಾಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರ ಜೊತೆ ಮಾತನಾಡುವ ವೇಳೆ ಅಣ್ಣಾಮಲೈ ಬಗ್ಗೆ ಪ್ರಶ್ನಿಸಿದಾಗ, ‘ಅಣ್ಣಾಮಲೈ ಬಿಜೆಪಿಯ ಉದಯೋನ್ಮುಖ ತಾರೆಯೇ ಎಂಬ ಪ್ರಶ್ನೆಗೆ ಅದು ಯಾರು? ನೀವು ಆ ಜೋಕರ್ ಬಗ್ಗೆ ಮಾತನಾಡುತ್ತಿದ್ದೀರಿ. ಅವರು ಕುಂಟ ಬಾತುಕೋಳಿ ’ ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಕೊಯಮತ್ತೂರಿನ ಮೆಟ್ಟುಪಾಳ್ಯಂದಲ್ಲಿ ನಡೆದ ರ್‍ಯಾಲಿಯಲ್ಲಿ ತಿರುಗೇಟು ನೀಡಿದ ಪ್ರಧಾನಿ ಮೋದಿ, ‘ಡಿಎಂಕೆ ನಾಯಕರೊಬ್ಬರು ಅಣ್ಣಾಮಲೈಗೆ ಜೋಕರ್ ಎಂದು ಅಹಂಕಾರದಿಂದ ಅವಹೇಳನಕಾರಿ ಪದ ಬಳಸಿದ್ದಾರೆ. ಈ ದುರಹಂಕಾರ ತಮಿಳುನಾಡಿನ ಸಂಸ್ಕೃತಿಗೆ ವಿರುದ್ಧವಾಗಿದೆ. ಈ ದುರಂಕಾರ ಜನರಿಗೆ ಎಂದಿಗೂ ಇಷ್ಟವಾಗುವುದಿಲ್ಲ. ಮಾಜಿ ಐಪಿಎಸ್ ಅಧಿಕಾರಿ, ಹಿಂದುಳಿದ ವರ್ಗದಿಂದ ಬಂದ ಯುವಕನಿಗೆ ಡಿಎಂಕೆ ಬಳಸುವ ಪದಗಳು ಪಕ್ಷದ ನೈಜ ಸ್ವರೂಪ ತೋರಿಸುತ್ತದೆ’ ಎಂದು ಹೇಳಿದರು.