ಬನ್ನಿ ಭಾರತವನ್ನು ಸೇರಿ, ಪಿಒಕೆ ಜನರಿಗೆ ರಕ್ಷಣಾ ಸಚಿವ ರಾಜನಾಥ್‌ ಕರೆ

| Published : Sep 09 2024, 01:40 AM IST

ಬನ್ನಿ ಭಾರತವನ್ನು ಸೇರಿ, ಪಿಒಕೆ ಜನರಿಗೆ ರಕ್ಷಣಾ ಸಚಿವ ರಾಜನಾಥ್‌ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

‘ಬನ್ನಿ ಭಾರತವನ್ನು ಸೇರಿಕೊಳ್ಳಿ. ನಾವು ನಿಮ್ಮನ್ನು ನಮ್ಮವರೆಂದೇ ಭಾವಿಸಿದ್ದೇವೆ’ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕರೆ ನೀಡಿದ್ದಾರೆ.

ಜಮ್ಮು:‘ಬನ್ನಿ ಭಾರತವನ್ನು ಸೇರಿಕೊಳ್ಳಿ. ನಾವು ನಿಮ್ಮನ್ನು ನಮ್ಮವರೆಂದೇ ಭಾವಿಸಿದ್ದೇವೆ’ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕರೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಂಬನ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಕೇಶ್‌ ಸಿಂಗ್‌ ಠಾಕೂರ್‌ ಪರ ಭಾನುವಾರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಸಿಂಗ್‌, ‘ನಾನು ಪಾಕ್‌ ಆಕ್ರಮಿತ ಕಾಶ್ಮೀರದ ನಿವಾಸಿಗಳಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಪಾಕಿಸ್ತಾನ ಸರ್ಕಾರ ನಿಮ್ಮನ್ನು ವಿದೇಶಿಯರೆಂದು ಪರಿಗಣಿಸುತ್ತದೆ. ಆದರೆ ನಾವು ಭಾರತೀಯರು, ನಿಮ್ಮನ್ನು ನಮ್ಮವರು ಎಂದೇ ಭಾವಿಸುತ್ತೇವೆ. ಹೀಗಾಗಿ ಬಂದು ನಮ್ಮನ್ನು ಸೇರಿಕೊಳ್ಳಿ’ ಎಂದು ಕರೆ ನೀಡಿದರು.

ಇದೇ ವೇಳೆ ಅಧಿಕಾರಕ್ಕೆ ಬಂದರೆ ರದ್ದಾಗಿರುವ 370ನೇ ವಿಧಿ ಮರುಸ್ಥಾಪನೆಯ ಕುರಿತು ಭರವಸೆ ನೀಡಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಬಗ್ಗೆ ಕಿಡಿಕಾರಿರುವ ಸಿಂಗ್‌, ‘ಬಿಜೆಪಿ ಇರುವವರೆಗೂ ಅದು ಸಾಧ್ಯವಾಗದು’ ಎಂದು ಸವಾಲು ಹಾಕಿದರು.

ಅಫ್ಜಲ್‌ಗೆ ಮಾಲೆ ಹಾಕ್ತೀರಾ?:

ಈ ನಡುವೆ, ‘ಅಫ್ಜಲ್ ಗುರುವನ್ನು ಗಲ್ಲಿಗೇರಿಸಬಾರದಿತ್ತು. ಅವರನ್ನು ಗಲ್ಲಿಗೇರಿಸಿದ ಉದ್ದೇಶ ಈಡೇರಿಲ್ಲ. ನಾನು ಯಾವುದೇ ಗಲ್ಲು ಶಿಕ್ಷೆಗೆ ವಿರೋಧ ಇದ್ದೇನೆ’ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿಕೆಯನ್ನು ರಾಜನಾಥ ಸಿಂಗ್‌ ತೀವ್ರವಾಗಿ ಖಂಡಿಸಿದರು.‘ಅಫ್ಜಲ್ ಗುರುವನ್ನು ಗಲ್ಲಿಗೇರಿಸಬಾರದಿತ್ತು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಅಫ್ಜಲ್ ಗುರುವಿಗೆ ಮಾಲೆ ಹಾಕಲು ಅವರು ಬಯಸಿದ್ದೀರಾ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ?’ ಸಿಂಗ್ ಪ್ರಶ್ನಿಸಿದರು.