ಬದರಿನಾಥ ದರ್ಶನ ಆರಂಭ : ದೀಪಾವಳಿವರೆಗೆ ಇನ್ನು ದರ್ಶನ

| N/A | Published : May 05 2025, 12:46 AM IST / Updated: May 05 2025, 06:51 AM IST

ಬದರಿನಾಥ ದರ್ಶನ ಆರಂಭ : ದೀಪಾವಳಿವರೆಗೆ ಇನ್ನು ದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

6 ತಿಂಗಳ ಕಾಲ ಮುಚ್ಚಲ್ಪಟ್ಟಿದ್ದ ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ದೇವಾಲಯದ ದ್ವಾರಗಳನ್ನು ಭಕ್ತರ ದರ್ಶನಕ್ಕಾಗಿ ಭಾನುವಾರ ತೆರೆಯಲಾಗಿದೆ.

ಬದರಿನಾಥ: 6 ತಿಂಗಳ ಕಾಲ ಮುಚ್ಚಲ್ಪಟ್ಟಿದ್ದ ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ದೇವಾಲಯದ ದ್ವಾರಗಳನ್ನು ಭಕ್ತರ ದರ್ಶನಕ್ಕಾಗಿ ಭಾನುವಾರ ತೆರೆಯಲಾಗಿದೆ.

ವೈದಿಕ ಮಂತ್ರಘೋಷದ ನಡುವೆ ಬೆಳಿಗ್ಗೆ 6 ಗಂಟೆಗೆ ಬಾಗಿಲುಗಳನ್ನು ತೆರೆಯಲಾಯಿತು. ಮುಖ್ಯದ್ವಾರದ ಜತೆಗೆ ಬದರಿನಾಥ ಧಾಮದಲ್ಲಿರುವ ಗಣೇಶ, ಘಂಟಕರ್ಣ, ಆದಿ ಕೇದಾರೇಶ್ವರ, ಆದಿ ಶಂಕಾರಾಚಾರ್ಯ ಮತ್ತು ಮಾತಾ ಮೂರ್ತಿ ದೇವಾಲಯದ ಬಾಗಿಲುಗಳೂ ತೆರೆದವು. 15 ಟನ್‌ ಹೂವಿನಿಂದ ದೇಗುಲವನ್ನು ಅಲಂಕರಿಸಲಾಗಿತ್ತು.ಪ್ರತಿ ವರ್ಷ ದೀಪಾವಳಿ ಬಳಿಕ ಚತುರ್ಧಾಮಗಳಾದ ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ದೇಗುಲಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಏಪ್ರಿಲ್-ಮೇ ತಿಂಗಳಲ್ಲಿ ತೆರೆಯಲಾಗುತ್ತದೆ.

ಗಗನಸಖಿ ಜತೆ ಅನುಚಿತ ವರ್ತನೆ: ಕುಡುಕ ಪ್ರಯಾಣಿಕನ ಬಂಧನ

ಮುಂಬೈ: ದೆಹಲಿಯಿಂದ ಮಹಾರಾಷ್ಟ್ರದ ಶಿರಡಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಗಗನಸಖಿಗೆ ಕಿರುಕುಳ ನೀಡಿದ್ದು, ಆತನನ್ನು ಶಿರಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಪ್ರಯಾಣಿಕ ವಿಮಾನದ ಶೌಚಾಲಯದ ಬಳಿ ಗಗನಸಖಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಕೂಡಲೇ ಗಗನಸಖಿ ಆರೋಪಿಯ ಅನುಚಿತ ವರ್ತನೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ವಿಮಾನ ನಿಲ್ದಾಣದ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ವಿಮಾನ ಇಳಿಯುತ್ತಿದ್ದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಆತನ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.

ವೈದ್ಯಕೀಯ ಪರೀಕ್ಷೆ ವೇಳೆ ಆರೋಪಿಯು ಕುಡಿತದ ಅಮಲಿನಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.