ಸಾರಾಂಶ
ಪ್ರಭು ಯೇಸು ಕ್ರಿಸ್ತರ ಪುನರುತ್ಥಾನದ ಪಾಸ್ಕ ಕಾಲದ (ಈಸ್ಟರ್) ಹಬ್ಬವನ್ನು ಸುಂಟಿಕೊಪ್ಪದ ಸಂತ ಅಂತೋಣಿ ದೇವಾಲಯದ ವತಿಯಿಂದ ಸಂತ ಮೇರಿ ಶಾಲಾವರಣದಲ್ಲಿ ಚರ್ಚಿಸಲಾಯಿತು. 
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಭು ಯೇಸು ಕ್ರಿಸ್ತರ ಪುನರುತ್ಥಾನದ ಪಾಸ್ಕಕಾಲದ (ಈಸ್ಟರ್) ಹಬ್ಬವನ್ನು ಸುಂಟಿಕೊಪ್ಪದ ಸಂತ ಅಂತೋಣಿ ದೇವಾಲಯದ ವತಿಯಿಂದ ಸಂತ ಮೇರಿ ಶಾಲಾವರಣದಲ್ಲಿ ಆಚರಿಸಲಾಯಿತು.ವಿವಿಧ ಸಾಂಘ್ಯಗಳ ಮೂಲಕ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆಯನ್ನು ಧರ್ಮಗುರುಗಳಾದ ರೇ.ಫಾ.ವಿಜಯಕುಮಾರ್, ಕನ್ಯಾಸ್ತ್ರೀಯರು ಹಾಗೂ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಹಬ್ಬ ನೆರವೇರಿಸುವ ಮೂಲಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಈಸ್ಟರ್ (ಪಾಸ್ಕ)ಹಬ್ಬವನ್ನು ಸಡಗರ ಸಂಭ್ರಮದಿಂದ ಮನೆಗಳಲ್ಲಿ ಆಚರಿಸಿಕೊಂಡರು.
ಪುನರುತ್ಥಾನ ಹಬ್ಬದ ಅಂಗವಾಗಿ ಶನಿವಾರ ರಾತ್ರಿ 11 ಗಂಟೆಗೆ ಸಂತ ಮೇರಿ ಶಾಲಾವರಣದಲ್ಲಿ ಸಂತ ಅಂತೋಣಿ ದೇವಾಲಯದ ಧರ್ಮಗುರು ರೇ.ಪಾ.ವಿಜಯಕುಮಾರ್ ಅವರು ಜೇನುಮೇಣದಿಂದ ತಯಾರಿಸಲಾದ ದೊಡ್ಡ ಮೊಂಬತ್ತಿ ಆಶೀರ್ವಚಿಸಿ ಸಂತ ಮೇರಿ ಶಾಲಾವರಣದಿಂದ ಅದನ್ನು ಬೆಳಗಿಸಿಕೊಂಡು ಭಕ್ತಾದಿಗಳೊಂದಿಗೆ ಮೆರವಣಿಗೆಯೊಂದಿಗೆ ಪೀಠದಲ್ಲಿ ತಂದು ಗುರುಗಳು ಪ್ರತಿಷ್ಠಾಪಿಸಿ ಆಚರಣೆಗೆ ಮುನ್ನುಡಿ ಇಡಲಾಯಿತು. ನಂತರ ನಡೆದ ಪ್ರಾರ್ಥನಾ ಕೂಟ ಹಾಗೂ ಆಡಂಬರ ದಿವ್ಯ ಬಲಿಪೂಜೆಯಲ್ಲಿ ಮರಣಹೊಂದಿದ ಸಮಾಧಿಗೊಳಿಸಲಾದ ಯೇಸುವು ಸಮಾಧಿಯಿಂದ ಪುನರ್‌ತ್ಥಾನಗೊಂಡಿರುವ ರೂಪಕ ದೃಶ್ಯದ ಅಂಗವಾಗಿ ಪ್ರಭು ಕ್ರಿಸ್ತರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಬಲಿಪೂಜೆ ಸಮರ್ಪಿಸಿದರು.ಈ ಆಡಂಬರ ದಿವ್ಯ ಬಲಿಪೂಜೆಯಲ್ಲಿ ಸಂತ ಕ್ಲಾರ ಕನ್ಯಾಸ್ತ್ರೀ ಕಾನ್ವೆಂಟಿನ ಕನ್ಯಾಸ್ತ್ರೀಯರು, ಗಾಯನ ವೃಂದದೊಂದಿಗೆ ನೂರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತಾದಿಗಳು ದೇವಾಲಯದಲ್ಲಿ ಪುನರ್‌ತ್ಥಾನದ ಆಡಂಬರ ಬಲಿಪೂಜೆ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡು ನಂತರ ಪ್ರಭು ಯೇಸು ಕ್ರಿಸ್ತರ ಪುನರುತ್ಥಾನಗೊಂಡು (ಈಸ್ಟರ್)ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಸಡಗರಕ್ಕೆ ಮುನ್ನುಡಿ ಇಟ್ಟರು.
ಈಸ್ಟರ್ ಮೊಟ್ಟೆ ಮತ್ತು ಕಾಫಿಯನ್ನು ನೆರೆದಿದ್ದ ಭಕ್ತಾದಿಗಳಿಗೆ ವಿತರಿಸಲಾಯಿತು.;Resize=(128,128))
;Resize=(128,128))
;Resize=(128,128))