ನಾಳೆ ಭಾರತದ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೆರಿಗೆ ದಾಳಿ ?

| N/A | Published : Apr 01 2025, 12:49 AM IST / Updated: Apr 01 2025, 04:31 AM IST

US President Donald Trump (File Photo/ Reuters)

ಸಾರಾಂಶ

ವಿದೇಶಗಳು ಅಮೆರಿಕದ ಉತ್ಪನ್ನಗಳ ಆಮದಿನ ಮೇಲೆ ಹೇರುವಷ್ಟೇ ಸುಂಕವನ್ನು ಆ ದೇಶಗಳ ಆಮದಿನ ಮೇಲೂ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಘೋಷಣೆ ಏ.2ರಿಂದ ಭಾರತದ ಸೇರಿದಂತೆ ವಿಶ್ವದಾದ್ಯಂತ ಜಾರಿಗೆ ಬರಲಿದೆ.

ನವದೆಹಲಿ: ವಿದೇಶಗಳು ಅಮೆರಿಕದ ಉತ್ಪನ್ನಗಳ ಆಮದಿನ ಮೇಲೆ ಹೇರುವಷ್ಟೇ ಸುಂಕವನ್ನು ಆ ದೇಶಗಳ ಆಮದಿನ ಮೇಲೂ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಘೋಷಣೆ ಏ.2ರಿಂದ ಭಾರತದ ಸೇರಿದಂತೆ ವಿಶ್ವದಾದ್ಯಂತ ಜಾರಿಗೆ ಬರಲಿದೆ.ಟ್ರಂಪ್‌ರ ಈ ನಿಧಾರ ಜಾಗತಿಕ ಆರ್ಥಿಕತೆ ಮೇಲೆ ಭಾರೀ ಗಂಭೀರ ಪರಿಣಾಮ ಬೀರುವ ಶಕ್ತಿ ಹೊಂದಿರುವ ಕಾರಣ ಏ.2ರ ದಿನವನ್ನು ಇಡೀ ಜಗತ್ತು ಕುತೂಹಲದ ದೃಷ್ಟಿಯಿಂದ ನೋಡುತ್ತಿದೆ.

‘ಭಾರತ ನಮ್ಮ ಮೇಲೆ ಅತಿ ಹೆಚ್ಚು ತೆರಿಗೆ ಹೇರುವ ರಾಷ್ಟ್ರ’ ಎಂದು ಪದೇಪದೇ ಹೇಳುತ್ತಿರುವ ಟ್ರಂಪ್‌, ಜಾಗತಿಕ ವ್ಯಾಪಾರವನ್ನು ಮರು ಸಮತೋಲನಗೊಳಿಸಿ, ಅಮೇರಿಕದ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಏ.2ರಿಂದ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ.25ರಷ್ಟು ತೆರಿಗೆ ಹೇರುವುದಾಗಿ ಘೋಷಿಸಿದ್ದರು.

ಆದರೆ ಈ ತೆರಿಗೆ ಯುದ್ಧ ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಭಾರತ ಮತ್ತು ಅಮೆರಿಕ ಅಧಿಕಾರಿಗಳ ಮಟ್ಟದ ಮಾತುಕತೆ ಅರಂಭಿಸಿದೆ. ಹೀಗಾಗಿ ಭಾರತ ಸೇರಿದಂತೆ ಅಮೆರಿಕದ ಕೆಲ ಮಿತ್ರ ದೇಶಗಳ ಮೇಲಿನ ತೆರಿಗೆ ದಾಳಿಯನ್ನು ಟ್ರಂಪ್‌ ಕೆಲ ಕಾಲ ಮುಂದೂಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.