ನ್ಯಾ.ವರಾಳೆ ಸುಪ್ರೀಂಗೆ ನೇಮಕ: ಇಂದು ಪ್ರಮಾಣ ವಚನ ಸ್ವೀಕಾರ

| Published : Jan 25 2024, 02:00 AM IST

ಸಾರಾಂಶ

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಪ್ರಸನ್ನ ಬಿ ವರಾಳೆ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರು ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು.

ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಧೀಶರಾಗಿದ್ದ ನ್ಯಾ.ಪ್ರಸನ್ನ ವರಾಳೆ ಅವರನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಕೇಂದ್ರ ಸರ್ಕಾರ ಬುಧವಾರ ನೇಮಕ ಮಾಡಿದೆ.

ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನ್ಯಾ. ವರಾಳೆ ಅವರ ಪದೋನ್ನತಿಗೆ ಇತ್ತೀಚೆಗಷ್ಟೇ ಕೊಲಿಜಿಯಂ ಶಿಫಾರಸು ಮಾಡಿತ್ತು.

ಅದನ್ನು ಅನುಮೋದಿಸಿರುವ ಕೇಂದ್ರ ಸರ್ಕಾರ ವರಾಳೆ ಅವರನ್ನು ನೇಮಕ ಮಾಡಿ ಬುಧವಾರ ಅಧಿಸೂಚನೆ ಹೊರಡಿಸಿದೆ.

ಇದರೊಂದಿಗೆ ಸುಪ್ರೀಂಕೋಟ್‌ರ್ಗೆ ಮಂಜೂರಾಗಿರುವ ಎಲ್ಲಾ 34 ಹುದ್ದೆಗಳು ಭರ್ತಿ ಆದಂತೆ ಆಗಿದೆ.

ನ್ಯಾ. ಎಸ್‌.ಕೆ.ಕೌಲ್‌ ಅವರು ಕಳೆದ ತಿಂಗಳು ನಿವೃತ್ತಿಯಾದ ಸ್ಥಳಕ್ಕೆ ವರಾಳೆ ಅವರನ್ನು ನೇಮಿಸಲಾಗಿದೆ.