ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರೇಮ್‌ ಸಿಂಗ್‌ ತಮಾಂಗ್‌ ಪ್ರಮಾಣ ವಚನ ಸ್ವೀಕಾರ

| Published : Jun 11 2024, 01:36 AM IST / Updated: Jun 11 2024, 08:27 AM IST

ಸಿಕ್ಕಿಂ ಮುಖ್ಯಮಂತ್ರಿಯಾಗಿ ಪ್ರೇಮ್‌ ಸಿಂಗ್‌ ತಮಾಂಗ್‌ ಪ್ರಮಾಣ ವಚನ ಸ್ವೀಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಿಕ್ಕಿಂ ಕ್ರಾಂತಿಕಾತಿ ಮೋರ್ಚಾ(ಎಸ್‌ಕೆಎಂ) ಅಧ್ಯಕ್ಷ ಪ್ರೇಮ್‌ ಸಿಂಗ್‌ ತಮಾಂಗ್‌ ಅವರು ಸೋಮವಾರ ಹಿಮಾಲಯ ರಾಜ್ಯಕ್ಕೆ 2ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಗ್ಯಾಂಗ್ಟಾಕ್: ಸಿಕ್ಕಿಂ ಕ್ರಾಂತಿಕಾತಿ ಮೋರ್ಚಾ(ಎಸ್‌ಕೆಎಂ) ಅಧ್ಯಕ್ಷ ಪ್ರೇಮ್‌ ಸಿಂಗ್‌ ತಮಾಂಗ್‌ ಅವರು ಸೋಮವಾರ ಹಿಮಾಲಯ ರಾಜ್ಯಕ್ಕೆ 2ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಇಲ್ಲಿನ ಪಲ್ಜೋರ್‌ ಕ್ರೀಡಾಂಗಣದಲ್ಲಿ ರಾಜ್ಯಪಾಲರಾದ ಲಕ್ಷ್ಮಣ್‌ ಪ್ರಸಾದ್‌ ಅವರು ತಮಾಂಗ್‌ ಅವರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಸಿಕ್ಕಿಂನ 32 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎಸ್‌ಕೆಎಂ 31 ಸ್ಥಾನಗಳಲ್ಲಿ ಜಯಭೇರಿ ಸಾಧಿಸಿ ಅಧಿಕಾರಕ್ಕೆ ಮರಳಿದೆ. 2019 ರವರೆಗೆ ಸತತ 25 ವರ್ಷಗಳ ಕಾಲ ರಾಜ್ಯವನ್ನು ಆಳಿದ ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್‌) ಕೇವಲ ಒಂದು ಸ್ಥಾನವನ್ನು ಗೆದ್ದಿತ್ತು.

==

ಒಡಿಶಾ ಸಿಎಂ ಆಯ್ಕೆಗೆ ಇಂದು ಬಿಜೆಪಿ ಸಭೆ: ರೇಸ್‌ನಲ್ಲಿ ನಾಲ್ವರು

ಭುವನೇಶ್ವರ್‌: ಒಡಿಶಾದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷ ಮಂಗಳವಾರ ಸಭೆ ಸೇರಲಿದೆ. ನೂತನ ಸಿಎಂ ಆಯ್ಕೆಯಾಗಿ ಪಕ್ಷದ ಹೈಕಮಾಂಡ್‌, ರಾಜನಾಥ್ ಸಿಂಗ್ ಮತ್ತು ಭೂಪೇಂದರ್ ಯಾದವ್ ಅವರನ್ನು ವೀಕ್ಷಕರನ್ನಾಗಿ ನೇಮಿಸಿದೆ. ಸುರೇಶ್‌ ಪೂಜಾರಿ, ರಾಜ್ಯ ಬಿಜೆಪಿ ಅಧ್ಯಕ್ಷ ಮನಮೋಹನ್‌ ಸಮಲ್‌, ಕೆ.ವಿ. ಸಿಂಗ್‌ ಮತ್ತು ಮೋಹನ್‌ ಮಂಜ್ಹೀ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 147 ಸದಸ್ಯ ಬಲದ ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ 78 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿತ್ತು. ಈ ಮೂಲಕ ಬಿಜೆಡಿ ನಾಯಕ ನವೀನ್‌ ಪಟ್ನಾಯಕ್‌ ಅವರ 24 ವರ್ಷಗಳ ಸುದೀರ್ಘ ಅಧಿಕಾರಕ್ಕೆ ಬ್ರೇಕ್‌ ಹಾಕಿತ್ತು.