ಸಾರಾಂಶ
*ಜೂ.9ಕ್ಕೆ ಸಿಕ್ಕಿಂ ಸಿಎಂ ಆಗಿ ಪ್ರೇಮ್ ಸಿಂಗ್ ಪ್ರಮಾಣ ಸ್ವೀಕರಿಸಲಿದ್ದು, ಪ್ರಸ್ತುತ ಚುನಾವಣೆಯಲ್ಲಿ ಅವರ ಎಸ್‌ಕೆಎಂ 32ರ ಪೈಕಿ 31 ಸ್ಥಾನ ಗೆದ್ದಿದ್ದ ಅವರ ಪಕ್ಷ ಪ್ರತಿಸ್ಪರ್ಧಿ ಎಸ್‌ಡಿಎಫ್ ಪಕ್ಷವನ್ನು ಧೂಳೀಪಟ ಮಾಡಿತ್ತು.
ಗ್ಯಾಂಗ್ಟಕ್: ಸಿಕ್ಕಿಂ ವಿಧಾನಸಭೆಯಲ್ಲಿ ಭಾರೀ ಬಹುಮತದ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರಿದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ನಾಯಕ ಪ್ರೇಮ್ ಸಿಂಗ್ ತಮಂಗ್ ಜೂ.9ಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ತಮಂಗ್, ‘ಗ್ಯಾಂಗ್ಟಕ್‌ನಲ್ಲಿರುವ ಪಾಲ್ಜೊರ್ ಕ್ರೀಡಾಂಗಣದಲ್ಲಿ ಸಿಕ್ಕಿಂ ಸಂಪುಟ ಪ್ರಮಾಣವಚನ ಸ್ವೀಕರಿಸಲಿದೆ. ಈ ಸಮಾರಂಭಕ್ಕೆ ರಾಜ್ಯದ ಮೂಲೆಮೂಲೆಗಳಿಂದ ನಮ್ಮ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಲಿದ್ದಾರೆ’ ಎಂದು ತಿಳಿಸಿದರು. ಜೊತೆಗೆ ತಮ್ಮ ಸಂಸದ ಕೇಂದ್ರದಲ್ಲಿ ಎನ್‌ಡಿಎ ಕೂಟದ ಭಾಗವಾಗಿರುವುದಾಗಿ ಸ್ಪಷ್ಟಪಡಿಸಿದರು.ಜೂ.2ರಂದು ಪ್ರಕಟವಾದ ಫಲಿತಾಂಶದಲ್ಲಿ ಸಿಕ್ಕಿಂ ವಿಧಾನಸಭೆಯಲ್ಲಿರುವ 32 ಕ್ಷೇತ್ರಗಳ ಪೈಕಿ 31ರಲ್ಲಿ ಎಸ್‌ಕೆಎಂ ಅಭೂತಪೂರ್ವ ಗೆಲುವು ದಾಖಲಿಸಿತ್ತು.