ಸಾರಾಂಶ
ಬಿಸಿ ಚರ್ಚೆಯ ನಂತರ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದ ವಕ್ಫ್ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ರಾತ್ರಿ ಒಪ್ಪಿಗೆ ನೀಡಿದ್ದಾರೆ.
ನವದೆಹಲಿ: ಬಿಸಿ ಚರ್ಚೆಯ ನಂತರ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದ ವಕ್ಫ್ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ರಾತ್ರಿ ಒಪ್ಪಿಗೆ ನೀಡಿದ್ದಾರೆ.
ಇನ್ನು ಸರ್ಕಾರದ ಅಧಿಸೂಚನೆ ಹೊರಬಿದ್ದರೆ ಕಾನೂನು ರೂಪದಲ್ಲಿ ಇದು ಜಾರಿಗೆ ಬರಲಿದೆ. ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಮೂಲಗಳು ಹೇಳಿವೆ.
ಹೊಸ ಕಾನೂನನ್ನು ಕಾಂಗ್ರೆಸ್, ಎಐಎಂಐಎಂ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿಗಳ ಮೂಲಕ ಪ್ರಶ್ನಿಸಿವೆ. ಆದರ ಅರ್ಜಿ ವಿಚಾರಣೆಗೆ ಇನ್ನೂ ಸಮಯವನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿಲ್ಲ.
ಸರ್ಕಾರಿ ಹಾಗೂ ಇತರ ಆಸ್ತಿಪಾಸ್ತಿಗಳ ಮೇಲೆ ಮನಬಂದಂತೆ ಹಕ್ಕು ಸಾಧಿಸುವ ಅಧಿಕಾರ ಹೊಂದಿದ್ದ ಆರೋಪ ಹೊತ್ತಿದ್ದ ವಕ್ಫ್ ಮಂಡಳಿಗೆ ಲಗಾಮು ಹಾಕಲು ವಕ್ಫ್ ತಿದ್ದುಪಡಿ ಮಸೂದಗೆ ಇತ್ತೀಚೆಗೆ ಮ್ಯಾರಥಾನ್ ಚರ್ಚೆ ಬಳಿಕ ಸಂಸತ್ತು ಅಂಗೀಕಾರ ನೀಡಿತ್ತು.