ದೇಶದ ಮೊದಲ ದೇಶೀ ಕ್ಯಾನ್ಸರ್‌ ಚಿಕಿತ್ಸೆಗೆ ರಾಷ್ಟ್ರಪತಿ ಚಾಲನೆ

| Published : Apr 05 2024, 01:04 AM IST / Updated: Apr 05 2024, 05:53 AM IST

ದೇಶದ ಮೊದಲ ದೇಶೀ ಕ್ಯಾನ್ಸರ್‌ ಚಿಕಿತ್ಸೆಗೆ ರಾಷ್ಟ್ರಪತಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಮೊದಲ ಸ್ವದೇಶಿ CAR-T Cell ಕ್ಯಾನ್ಸರ್‌ ಚಿಕಿತ್ಸಾ ಪದ್ಧತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದರು.

ಮುಂಬೈ: ದೇಶದ ಮೊದಲ ಸ್ವದೇಶಿ CAR-T Cell ಕ್ಯಾನ್ಸರ್‌ ಚಿಕಿತ್ಸಾ ಪದ್ಧತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದರು.

ಗುರುವಾರ ಮಹಾರಾಷ್ಟ್ರದ ಪೋವೈನಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಇದನ್ನು ಅವರು ಲೋಕಾರ್ಪಣೆ ಮಾಡಿದರು. ಈ ಚಿಕಿತ್ಸಾ ವಿಧಾನವನ್ನು ಐಐಟಿ ಬಾಂಬೆ ಹಾಗೂ ಟಾಟಾ ಮೆಮೋರಿಯಲ್‌ ಸೆಂಟರ್‌ ಜಂಟಿಯಾಗಿ ಅಭಿವೃದ್ಧಿಗೊಳಿಸಿವೆ.

ಇದರಿಂದಾಗಿ ಸುಮಾರು 4 ಕೋಟಿ ರು. ತಗುಲುತ್ತಿದ್ದ ಚಿಕಿತ್ಸಾ ವಿಧಾನ ಗಣನೀಯವಾಗಿ ಕಡಿಮೆಯಾಗಲಿದೆ. ಈ ಚಿಕಿತ್ಸಾ ವಿಧಾನದಿಂದಗಿ ಹಲವು ವಿಧದ ರಕ್ತ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದಾಗಿದೆ. NexCAR19 CAR T-Cell ಚಿಕಿತ್ಸಾ ವಿಧಾನವು ಮೊದಲ ಸ್ವದೇಶಿ ಅಭಿವೃದ್ಧಿ ಪಡಿಸಿದ CAR T-Cell ಚಿಕಿತ್ಸಾ ವಿಧಾನವಾಗಿದೆ.